* ಟಿ-20 ಕ್ರಿಕೆಟ್ ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಒಲಿಂಪಿಕ್ ಕ್ರೀಡಾಕೂಟ ಸೇರಲಿದೆ.* 2028ರ ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಟಿ-20 ಕ್ರಿಕೆಟ್ ಮತ್ತು ಇತರ ಕ್ರೀಡೆಗಳು ಸೇರ್ಪಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.* ಬೇಸ್‌ ಬಾಲ್, ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕರಾಟೆ, ಕಿಕ್‌ ಬಾಕ್ಸಿಂಗ್, ಸ್ಟಾಪ್ ಮತ್ತು ಮೋಟಾ‌ಸ್ಪೋರ್ಟ್‌ ಜೊತೆಗೆ 2028ರ ಲಾಸ್ ಎಂಜಲೀಸ್ ಒಲಿಂಪಿಕ್ ಕ್ರೀಡಾಕೂಟ ಆಯ್ಕೆಯಾದ ಒಂಬತ್ತು ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ ಎಂದು ತಿಳಿಸಲಾಗಿದೆ.