* ವೈಮಾನಿಕ ಅಭಿವೃದ್ಧಿ ಸಂಸ್ಥೆ (ADA) ಚಂಡಿಪುರದಲ್ಲಿ LCA AF MK1 ವಿಮಾನದಿಂದ ಸ್ವದೇಶಿ ಅಸ್ಟ್ರಾ ಬಿಯಾಂಡ್ ವಿಷುಯಲ್ ರೇಂಜ್ ಏರ್-ಟು-ಏರ್ ಕ್ಷಿಪಣಿ (BVRAAM)ಯ ಯಶಸ್ವಿ ಪರೀಕ್ಷಾ ಉಡಾವಣೆಯನ್ನು ನಡೆಸಿತು.* ಅಸ್ಟ್ರಾ ಕ್ಷಿಪಣಿ ನಿಖರ ದಾಳಿ ನಡೆಸಿ ಮಿಷನ್ ಉದ್ದೇಶಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಅದರ ಸುಧಾರಿತ ಸಾಮರ್ಥ್ಯಗಳನ್ನು ಪ್ರದರ್ಶಿಸಿದೆ.* LCA AF MK1A ಯಶಸ್ವಿ ಪರೀಕ್ಷಾರ್ಥ ಹಾರಾಟವು ಭಾರತದ ಸ್ಥಳೀಯ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವತ್ತ ಮಹತ್ವದ ಮೈಲಿಗಲ್ಲಾಗಿದೆ. ಈ ಸಾಧನೆ ADA, DRDO, HAL, CEMILAC, DG-AQA, IAF ಹಾಗೂ ಪರೀಕ್ಷಾ ಶ್ರೇಣಿ ತಂಡದ ಸಂಯೋಜಿತ ಪ್ರಯತ್ನಗಳ ಫಲಿತಾಂಶವಾಗಿದೆ.* ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು DRDO ಅಧ್ಯಕ್ಷ ಡಾ. ಸಮೀರ್ ವಿ. ಕಾಮತ್ ಯಶಸ್ವಿ ಪ್ರಯೋಗಕ್ಕಾಗಿ DRDO, IAF, ADA, HAL ತಂಡಗಳು ಹಾಗೂ ವಿಜ್ಞಾನಿಗಳು, ಎಂಜಿನಿಯರ್ಗಳನ್ನು ಅಭಿನಂದಿಸಿದರು.