Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಅಸಭ್ಯ ಎಐ ಕಂಟೆಂಟ್ ನಿಷೇಧ: ಫೆಬ್ರವರಿ 20ರಿಂದ ಹೊಸ ನಿಯಮಗಳು ಜಾರಿ
Authored by:
Akshata Halli
Date:
12 ಫೆಬ್ರುವರಿ 2026
➤ ಸಾಮಾಜಿಕ ಜಾಲತಾಣಗಳಲ್ಲಿ ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನದ ದುರ್ಬಳಕೆಯನ್ನು ತಡೆಯಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. 2021ರ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ನಿಯಮಗಳಿಗೆ ತಿದ್ದುಪಡಿ ತಂದಿದ್ದು,
ಫೆಬ್ರವರಿ 20, 2026
ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.
➤ ಇತ್ತೀಚಿನ ದಿನಗಳಲ್ಲಿ ಡೀಪ್ಫೇಕ್ (Deepfake) ಮತ್ತು ಎಐ ರಚಿತ ಆಕ್ಷೇಪಾರ್ಹ ದೃಶ್ಯಗಳ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ನಿಯಮದ ಪ್ರಮುಖ ಅಂಶಗಳು ಇಲ್ಲಿವೆ:
=>
3 ಗಂಟೆಯ ಗಡುವು:
ಯಾವುದೇ ಕಾನೂನುಬಾಹಿರ ಅಥವಾ ಆಕ್ಷೇಪಾರ್ಹ ಪೋಸ್ಟ್ಗಳನ್ನು ನ್ಯಾಯಾಲಯ ಅಥವಾ ಪ್ರಾಧಿಕಾರ ಸೂಚಿಸಿದ ಕೇವಲ
3 ಗಂಟೆಯೊಳಗೆ
ಸಾಮಾಜಿಕ ಜಾಲತಾಣ ಸಂಸ್ಥೆಗಳು (X, YouTube, Facebook ಇತ್ಯಾದಿ) ತೆಗೆದುಹಾಕಬೇಕು. ಈ ಹಿಂದೆ ಇದು 36 ಗಂಟೆಗಳ ಕಾಲಾವಕಾಶವಿತ್ತು.
=>
ಲೇಬಲಿಂಗ್ ಕಡ್ಡಾಯ:
ಎಐ ಮೂಲಕ ಸೃಷ್ಟಿಸಲಾದ ಯಾವುದೇ ಆಡಿಯೋ, ವಿಡಿಯೋ ಅಥವಾ ಫೋಟೋಗಳ ಮೇಲೆ
"AI ರಚಿತ" (AI-Generated)
ಎಂಬ ಲೇಬಲ್ ಇರುವುದು ಕಡ್ಡಾಯ. ಇದು ವೀಕ್ಷಕರಿಗೆ ಸ್ಪಷ್ಟವಾಗಿ ಕಾಣುವಂತಿರಬೇಕು.
=>
ಮೆಟಾ ಡೇಟಾ ಮಾರ್ಕರ್:
ಎಐ ಕಂಟೆಂಟ್ಗಳಲ್ಲಿ ಶಾಶ್ವತವಾದ ಮೆಟಾ ಡೇಟಾ ಅಥವಾ ಐಡೆಂಟಿಫೈಯರ್ ಇರಬೇಕು, ಇದರಿಂದ ಆ ಕಂಟೆಂಟ್ನ ಮೂಲವನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.
=>
ಲೈಂಗಿಕ ಶೋಷಣೆ ಮತ್ತು ಅಶ್ಲೀಲತೆ ತಡೆ:
ಅಶ್ಲೀಲ ಚಿತ್ರಗಳು, ಲೈಂಗಿಕ ದೌರ್ಜನ್ಯದ ಎಐ ಕಂಟೆಂಟ್ ಅಥವಾ ನಕಲಿ ದಾಖಲೆಗಳ ಪೋಸ್ಟ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ. ಅಂತಹ ಕಂಟೆಂಟ್ಗಳನ್ನು ತೆಗೆಯಲು ಕೇವಲ
2 ಗಂಟೆಗಳ
ಕಾಲಾವಕಾಶ ನೀಡಲಾಗಿದೆ
➤
ಹೊಸ ನಿಯಮದ ಅಗತ್ಯ:
=>
ಡೀಪ್ಫೇಕ್ ತಡೆ:
ಚಲನಚಿತ್ರ ತಾರೆಯರು ಮತ್ತು ಗಣ್ಯ ವ್ಯಕ್ತಿಗಳ ಮುಖವನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವುದು.
=>
ನಕಲಿ ದಾಖಲೆಗಳ ಪತ್ತೆ:
ಎಐ ಬಳಸಿ ಸೃಷ್ಟಿಸುವ ನಕಲಿ ಆಧಾರ್ ಅಥವಾ ಚುನಾವಣಾ ದಾಖಲೆಗಳನ್ನು ನಿಯಂತ್ರಿಸುವುದು.
=>
ಸೈಬರ್ ಭದ್ರತೆ:
ಹಣಕಾಸು ವಂಚನೆ ಮತ್ತು ಡಿಜಿಟಲ್ ಪರ್ಸನಾಲಿಟಿ ಹರಣವನ್ನು ತಡೆಯುವುದು.
ಈ ನಿಯಮವು ಕೇವಲ ಜನಸಾಮಾನ್ಯರಿಗೆ ಮಾತ್ರವಲ್ಲದೆ, ChatGPT, Gemini ಮತ್ತು Grok ನಂತಹ ಎಐ ಸಾಧನಗಳನ್ನು ಒದಗಿಸುವ ಕಂಪನಿಗಳಿಗೂ ಕಟ್ಟುನಿಟ್ಟಿನ ಜವಾಬ್ದಾರಿಯನ್ನು ಹೊರಿಸಿದೆ.
Take Quiz
Loading...