* ನ್ಯೂಯಾರ್ಕ್ನ ಮೇಯರ್ ಎರಿಕ್ ಆ್ಯಡಮ್ಸ್ ಅವರು ಈ ವರ್ಷದ ಏಪ್ರಿಲ್ 14ರಂದು ‘ಡಾ. ಬಿ.ಆರ್. ಅಂಬೇಡ್ಕರ್ ದಿನ’ವಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.* ಈ ಸಂಬಂಧಿತ ಘೋಷಣಾ ಪತ್ರವನ್ನು ನ್ಯೂಯಾರ್ಕ್ ಮೇಯರ್ ಕಚೇರಿಯ ಅಂತರರಾಷ್ಟ್ರೀಯ ವ್ಯವಹಾರಗಳ ಡೆಪ್ಯುಟಿ ಕಮಿಷನರ್ ದಿಲೀಪ್ ಚೌಹಾನ್ ಅವರು, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್ ಆಠವಲೆ ಅವರಿಗೆ ನೀಡಿದರು.* "ಡಾ. ಅಂಬೇಡ್ಕರ್ ಅವರು ಭಾರತದ ಪ್ರತಿಷ್ಠಿತ ಅರ್ಥಶಾಸ್ತ್ರಜ್ಞರು, ರಾಜಕೀಯ ನಾಯಕರು ಮತ್ತು ಸಮಾಜ ಸುಧಾರಕರಾಗಿದ್ದು, ಭಾರತೀಯ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು" ಎಂಬುದಾಗಿ ಘೋಷಣಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.* ಡಾ. ಬಿ.ಆರ್. ಅಂಬೇಡ್ಕರ್ ಅವರು 1927ರಲ್ಲಿ ಅಮೆರಿಕದ ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿದ್ದರು.