* ‘ಭಾರತ ನ್ಯಾಯದಾನ ವರದಿ 2025’ ಪ್ರಕಾರ, ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಎಸ್ಸಿ, ಎಸ್ಟಿ ಹಾಗೂ ಒಬಿಸಿ ಮೀಸಲನ್ನು ಶೇ.100ರಷ್ಟು ಜಾರಿಗೆ ತಂದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ವರದಿಯಲ್ಲಿ ಕರ್ನಾಟಕ ದೇಶದಲ್ಲಿ ಒಟ್ಟಾರೆ ಮೊದಲ ಸ್ಥಾನ ಪಡೆದಿದೆ.* 2017ರಿಂದ, ಕರ್ನಾಟಕ ಸೇರಿದಂತೆ 6 ಹೈಕೋರ್ಟ್ಗಳು ವಾರ್ಷಿಕ ಪ್ರಕರಣ ಇತ್ಯರ್ಥದಲ್ಲಿ ಶೇ.100ಕ್ಕಿಂತ ಹೆಚ್ಚು ಸಾಧನೆ ಮಾಡಿವೆ.* ಪೊಲೀಸಿಂಗ್ನಲ್ಲಿ 3ನೇ, ಕಾರಾಗೃಹ ನಿರ್ವಹಣೆಯಲ್ಲಿ 2ನೇ, ನ್ಯಾಯಾಂಗದಲ್ಲಿ 4ನೇ, ಕಾನೂನು ನೆರವಿನಲ್ಲಿ 1ನೇ ಸ್ಥಾನ ಪಡೆದು, ಒಟ್ಟು 10ಕ್ಕೆ 6.78 ಅಂಕ ಗಳಿಸಿದೆ.* ಭಾರತೀಯ ಪೊಲೀಸ್ ಪಡೆಯಲ್ಲಿ ಶೇ.33ರಷ್ಟು ಮಹಿಳಾ ಪ್ರತಿನಿಧಿತ್ವ ಗುರಿಯಾಗಿದೆ. ಪ್ರಸ್ತುತ ಬೆಳವಣಿಗೆ ದರದಂತೆ, ಕರ್ನಾಟಕ ಈ ಹಂತ ತಲುಪಲು 115.7 ವರ್ಷ ಬೇಕಾಗಬಹುದು.* ಪೊಲೀಸ್ ವ್ಯವಸ್ಥೆ, ಜೈಲು ನಿರ್ವಹಣೆ, ನ್ಯಾಯದಾನ ಮತ್ತು ಕಾನೂನು ನೆರವು ಎಂಬ ನಾಲ್ಕು ಸ್ತಂಭಗಳ ಆಧಾರದ ಮೇಲೆ ರಾಜ್ಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಿ ಸುಧಾರಣೆಗಾಗಿ ಮಾರ್ಗದರ್ಶನ ನೀಡುವುದು ಈ ವರದಿಯ ಉದ್ದೇಶವಾಗಿದೆ.