* ನ್ಯಾಟೊ ಪ್ಲಸ್ ಗುಂಪಿನ ಭಾಗವನ್ನಾಗಿಸಲು ಭಾರತವನ್ನು ಸೆನೆಟ್‌ನಲ್ಲಿ ಮಸೂದೆ ಮಂಡಿಸಲು ಯೋಜಿಸಿರುವುದಾಗಿ ಅಮೆರಿಕದ ಪ್ರಭಾವಿ ಸೆನೆಟರ್‌ಗಳು ತಿಳಿಸಿದ್ದಾರೆ.* ಅಮೆರಿಕದ ರಕ್ಷಣಾ ಸಂಬಂಧಗಳ ಒಪ್ಪಂದ ಜತೆಗೆ ಭಾರತವನ್ನು ರಕ್ಷಣಾ ಕ್ಷೇತ್ರದಲ್ಲಿ ಮೇಲ್ದರ್ಜೆಗೇರಿಸುವ ರಕ್ಷಣಾ ಅಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾದ ಸ್ವತಂತ್ರ ಮಸೂದೆಯನ್ನು ಮಂಡಿಸಲಾಗುವುದು' ಎಂದು ಸೆನೆಟ‌ ಮಾರ್ಕ್ ವಾರ್ನ‌ ಅವರು ತಿಳಿಸಿದ್ದಾರೆ.* ನ್ಯಾಟೊ ಪ್ಲಸ್ ಪ್ರಸ್ತುತ ನ್ಯಾಟೊ ಪ್ಲಸ್‌ 5 ಆಗಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಸ್ರೇಲ್, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳು ಈ ಗುಂಪಿನಲ್ಲಿವೆ. ಈ ಐದು ಮಿತ್ರ ರಾಷ್ಟ್ರಗಳು ಮತ್ತು ನ್ಯಾಟೊ ನಡುವೆ ರಕ್ಷಣಾ ಮತ್ತು ಗುಪ್ತಚರ ಮಾಹಿತಿಗಳ ವಿನಿಮಯದ ಜೊತೆಗೆ ನ್ಯಾಟೊದೊಂದಿಗೆ ಒಟ್ಟುಗೂಡಿಸುವ, ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸುವ ಗುರಿಯನ್ನು ನ್ಯಾಟೊ ಪ್ಲಸ್ ಹೊಂದಿದೆ.