* ಕೇಂದ್ರ ಸರ್ಕಾರ 'ನವ್ಯಾ' ಎಂಬ ಹೊಸ ಯೋಜನೆಗೆ ಚಾಲನೆ ನೀಡಿದ್ದು, 16 ರಿಂದ 18 ವರ್ಷದ ಯುವತಿಯರನ್ನು ವೃತ್ತಿಪರ ಕೌಶಲಗಳ ಮೂಲಕ ಸಬಲೀಕರಣಗೊಳಿಸುವುದು ಇದರ ಉದ್ದೇಶವಾಗಿದೆ.* ಈ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹಾಗೂ ಕೌಶಲ ಅಭಿವೃದ್ಧಿ ಸಚಿವಾಲಯದ ಸಹಯೋಗದೊಂದಿಗೆ ಆರಂಭವಾಗಿದೆ.* ಈ ಯೋಜನೆಯು ಈಶಾನ್ಯ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ವಿಕಸಿತ ಭಾರತ 2047 ದೃಷ್ಟಿಕೋನಕ್ಕೆ ಪೂರಕವಾಗಿದೆ.* ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ ಯುವತಿಯರಿಗೆ ಸಂಪೂರ್ಣ ಕೌಶಲ ತರಬೇತಿಯನ್ನು ನೀಡುವ ಮೂಲಕ ಅವರ ಆತ್ಮವಿಶ್ವಾಸ ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶವಿದೆ.* ಡಿಜಿಟಲ್ ಕೌಶಲ ತರಬೇತಿಯನ್ನು ನೀಡಿ, ಶಿಕ್ಷಣ ಮತ್ತು ಉದ್ಯೋಗಾರ್ಹತೆ ನಡುವಿನ ಅಂತರವನ್ನು ಕಡಿಮೆ ಮಾಡುವುದು 'ನವ್ಯಾ' ಯೋಜನೆಯ ಪ್ರಮುಖ ಗುರಿ.* ಈ ಯೋಜನೆ 19 ರಾಜ್ಯಗಳ 27 ಜಿಲ್ಲೆಗಳಲ್ಲಿ ಪ್ರಧಾನ ಮಂತ್ರಿ ಕೌಶಲ ವಿಕಾಸ್ ಯೋಜನೆ ಮತ್ತು ಇತರ ಯೋಜನೆಗಳ ಮೂಲಕ ಅನುಷ್ಠಾನಗೊಳ್ಳುತ್ತಿದೆ.