* ಮುಂದಿನ ವರ್ಷದ ಫೆಬ್ರುವರಿ 27ರಿಂದ ಮಾರ್ಚ್ 1ರ ವರೆಗೆ ರಾಜ್ಯದಲ್ಲಿ ನಡೆಯಲಿರುವ 'ಅನಿಮೇಷನ್, ವಿಷುಯಲ್ ಎಫೆಕ್ಟ್ ಗೇಮಿಂಗ್ ಮತ್ತು ಕಾಮಿಕ್ಸ್' (ಎವಿಜಿಸಿ) ಸಮ್ಮೇಳನಕ್ಕೆ ಸಂಬಂಧಿಸಿದಂತೆ 'ಜಿಎಎಫ್‌ಎಕ್ಸ್ 2025- 'ಮ್ಯಾಜಿನೇಶನ್ ನೆಕ್ಸ್' ಘೋಷವಾಕ್ಯ ಮತ್ತು ಕರಪತ್ರವನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಗಸ್ಟ್ 19 ರಂದು (ಸೋಮವಾರ) ಬಿಡುಗಡೆ ಮಾಡಿದರು.* ಈ ಉಪಕ್ರಮಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಗೇಮಿಂಗ್ ಮತ್ತು ಮಾಧ್ಯಮ ಉದ್ಯಮಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬೆಂಬಲಿಸುವ ಅದರ ವಿಶಾಲ ಕಾರ್ಯತಂತ್ರದ ಭಾಗವಾಗಿದೆ.* ಆಗಸ್ಟ್ 19. 2024ರಂದು (ಸೋಮವಾರ) ನಡೆದ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, “ಕಿಟ್ವನ್ ಫಂಡ್ 4 ಸೇರಿದಂತೆ ನಮ್ಮ ಉಪಕ್ರಮಗಳು ಎವಿಜಿಸಿ-ಎಕ್ಸ್‌ಆರ್‌ನಲ್ಲಿ ಸ್ಟಾರ್ಟಪ್‌ಗಳು ಮತ್ತು ಎಸ್‌ಎಂಇಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿವೆ. * ರಾಜ್ಯದ ಉಪಕ್ರಮ ಕರ್ನಾಟಕ ಮಾಹಿತಿ ತಂತ್ರಜ್ಞಾನ ವೆಂಚರ್ ಕ್ಯಾಪಿಟಲ್ ಫಂಡ್ (KITVEN ಫಂಡ್ 4), AVGC-XR (ವಿಸ್ತೃತ ರಿಯಾಲಿಟಿ) ವಲಯದಲ್ಲಿ ಸ್ಟಾರ್ಟ್-ಅಪ್‌ಗಳು ಮತ್ತು SME ಗಳನ್ನು ಬೆಂಬಲಿಸುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.* ಎವಿಜಿಸಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದಲ್ಲಿ ನವೋದ್ಯಮ, ಸಣ್ಣ ಉದ್ಯಮ ಆರಂಭಿಸುವವರಿಗೆ ಕೆಐಟಿವಿಇಎನ್ - 04 ನಿಧಿ ಮೂಲಕ ರಾಜ್ಯ ಸರಕಾರವು ಪ್ರೋತ್ಸಾಹ ನೀಡಲಿದೆ.* ಉದ್ಯಮ ಆರಂಭಿಸುವವರಿಗೆ 50 ಲಕ್ಷದಿಂದ 1 ಕೋಟಿವರೆಗೆ ಪ್ರಾಥಮಿಕ ಹೂಡಿಕೆ ಅನುದಾನ, ಬಳಿಕ ಉದ್ಯಮ ಬೆಳೆಸಲು 2 ಕೋಟಿವರೆಗೆ ಅನುದಾನ ನೀಡಲಾಗುವುದು ಎಂದು ತಿಳಿಸಿದರು.