* ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ವಿಪುಲ ಅವಕಾಶ ಸೃಷ್ಟಿಯಾಗಿದ್ದು, ಉದ್ಯಮ ವಲಯ ವಿಶೇಷವಾಗಿ, ಆಸ್ಟ್ರೇಲಿಯಾ ಕಂಪನಿಗಳು ಈ ಅವಕಾಶ ಬಳಸಿಕೊಳ್ಳಲು ಉತ್ಸುಕತೆ ತೋರಿವೆ.* ಈ ವಲಯದಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಹೂಡಿಕೆ ಪ್ರಮಾಣ ಗಮನಿಸಿದರೆ ಸೌರಶಕ್ತಿ ಉತ್ಪಾದನೆಯಲ್ಲಿ ಒಂದು ವರ್ಷದೊಳಗೆ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನಕ್ಕೆ ಏರುವ ನಿರೀಕ್ಷೆ ಮೂಡಿದೆ. ನಿರೀಕ್ಷೆಯನ್ನು 'ಜಿಮ್ 2025 ಬಲಪಡಿಸಿದೆ. * ನವೀಕರಿಸಬಹುದಾದ ಇಂಧನದ ಅತ್ಯಧಿಕ ಸ್ಥಾಪಿತ ಸಾಮರ್ಥ್ಯ ಹೊಂದಿರುವ ದೇಶದ ಮೊದಲ 5 ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದ್ದು, ಸೌರ ಹಾಗೂ ಪವನ ವಿದ್ಯುತ್ ಉತ್ಪಾದನಾ ಸಾಮರ್ಥದಲ್ಲಿ 3ನೇ ಸ್ಥಾನದಲ್ಲಿದೆ.* ಶುದ್ಧ ಇಂಧನ, ಗ್ರೀನ್ ಹೈಡೋಜನ್, ಬ್ಯಾಟರಿ ಪವರ್ ಸ್ಟೋರೇಜ್ ಮತ್ತು ಸಂಬಂಧಿತ ವಲಯಗಳಲ್ಲಿ ನೂತನ ತಂತ್ರಜ್ಞಾನಗಳ ಸದ್ಬಳಕೆ ಹಾಗೂ) ಹೂಡಿಕೆ ಹೆಚ್ಚಳದಿಂದಾಗಿ ಈ ವಲಯದಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೆ ಏರುವ ರಾಜ್ಯದ ಉತ್ಸಾಹ ಗಟ್ಟಿಯಾಗಿದೆ.