* ಅಳಿವಿನಂಚಿನಲ್ಲಿರುವ ಜಾಗ್ವಾರ್ ಪ್ರಭೇದಗಳನ್ನು ರಕ್ಷಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ವಾರ್ಷಿಕವಾಗಿ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ. ಈ ದಿನ ವು ಜಾಗ್ವಾರ್ ಸಂತತಿಗಳ ರಕ್ಷಣೆ ಹಾಗೂ ಮತ್ತು ಅವುಗಳ ಆವಾಸಸ್ಥಾನಗಳ ಸಂರಕ್ಷಣೆಯ ತುರ್ತು ಅಗತ್ಯವನ್ನು ಎತ್ತಿ ತೋರಿಸುತ್ತದೆ.* 2020 ರಲ್ಲಿ, ವರ್ಲ್ಡ್ ವೈಲ್ಡ್ಲೈಫ್ ಫೆಡರೇಶನ್ (WWF) ಜಾಗ್ವಾರ್ಗಳ ಸಂತತಿಗಳನ್ನು ಉಳಿಸಲು ಹಾಗೂ 2030 ರ ವೇಳೆಗೆ ಅವುಗಳ ಆವಾಸಸ್ಥಾನಗಳನ್ನು ಉಳಿಸಲು ಸಹಾಯ ಮಾಡುವ ಯೋಜನೆಯನ್ನು ಪ್ರಾರಂಭಿಸಿತು. ಮಾರ್ಚ್ 2018 ರಲ್ಲಿ ನ್ಯೂಯಾರ್ಕ್ನಲ್ಲಿ ಯುನೈಟೆಡ್ ನೇಷನ್ಸ್ನಲ್ಲಿ ಜಾಗ್ವಾರ್ ಆವಾಸಸ್ಥಾನಗಳನ್ನು ಹೊಂದಿರುವ 14 ದೇಶಗಳ ಪ್ರತಿನಿಧಿಗಳು ಜಾಗ್ವಾರ್ ಉಳಿಯುವಿಕೆ 2030 ಗಾಗಿ ಒಟ್ಟುಗೂಡಿದರು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಜಾಗ್ವಾರ್ ದಿನದ ಕಲ್ಪನೆಯನ್ನು ಒಳಗೊಂಡಂತೆ ಜಾಗ್ವಾರ್ಗಳನ್ನು ಉಳಿಸಲು ಅನೇಕ ಜಂಟಿ ಪ್ರಯತ್ನಗಳಿಗೆ ಕಾರಣವಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು ಆಚರಿಸಲಾಗುತ್ತದೆ. * ಚಿರತೆಗೂ ಜಾಗ್ವಾರ್ ಗೂ ಇರುವ ವ್ಯತ್ಯಾಸ : - ಚಿರತೆಯ ದೇಹದ ಮೇಲಿನ ಮಚ್ಚೆಗಳು ಅಷ್ಟೊಂದು ದೊಡ್ಡ ಗಾತ್ರವನ್ನು ಹೊಂದಿಲ್ಲ. ಎರಡು ಚುಕ್ಕೆಗಳ ನಡುವಿನ ಅಂತರವು ತುಂಬಾ ಕಡಿಮೆಯಾಗಿರುತ್ತದೆ. ಆದರೆ ಜಾಗ್ವಾರ್ನ ಮೈ ಮೇಲಿರುವ ಮಚ್ಚೆಗಳು ದೊಡ್ಡದಾಗಿರುತ್ತವೆ.- ಚಿರತೆಗಳು ಹೆಚ್ಚು ಗಾಢವಾದ ಚುಕ್ಕೆಗಳು ಮತ್ತು ಚರ್ಮದ ಮೇಲೆ ಕಂಡುಬರುವ ಗುಲಾಬಿ-ತರಹದ ಗುರುತುಗಳಿಂದ ಆವೃತವಾಗಿವೆ. ಆದರೆ ಜಾಗ್ವಾರ್ಗಳು ವಿಭಿನ್ನ ಆಂತರಿಕ ಚುಕ್ಕೆಗಳನ್ನು ಹೊಂದಿರುವ ಕಪ್ಪು ಬಣ್ಣದಿಂದ ಕೂಡಿದ ಗುಲಾಬಿ ಆಕೃತಿಯಲ್ಲಿರುತ್ತವೆ.- ಜಾಗ್ವಾರ್ಗಳು ಮಧ್ಯ ಮತ್ತು ದಕ್ಷಿಣ ಅಮೆರಿಕಾದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಆದರೆ ಚಿರತೆಗಳನ್ನು ಆಫ್ರಿಕಾ ಮತ್ತು ಏಷ್ಯಾದಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ.- ಚಿರತೆಗೆ ಹೋಲಿಸಿದರೆ ಈ ಜಾಗ್ವಾರ್ ಗಾತ್ರದಲ್ಲಿ ತುಂಬಾನೇ ದೊಡ್ಡದು. ಇವು 65ರಿಂದ 140 ತೂಕವನ್ನು ಹೊಂದಿದೆ.