* ಭಾರತದ ಸಂವಿಧಾನದ ದಿನವನ್ನು ಪ್ರತಿವರ್ಷನವೆಂಬರ್ 26 ರಂದು ಆಚರಿಸಲಾಗುತ್ತದೆ, ಮತ್ತು ಸಂವಿಧಾನದ ಅಂಗೀಕಾರದ ನೆನಪಿಗಾಗಿ ಇದನ್ನು ಆಚರಿಸಲಾಗುವುದು.* ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr. B. R. Ambedkar) ಅವರ 125ನೇ ಜನ್ಮ ದಿನಾಚರಣೆಯನ್ನು ಸ್ಮರಿಸಲು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸಲು 2015 ನವೆಂಬರ್ 19 ರಂದು ಭಾರತ ಸರ್ಕಾರವು ನವೆಂಬರ್ 26 ಅನ್ನು ಸಂವಿಧಾನದ ದಿನ ಎಂದು ಗೆಜೆಟ್ ಪ್ರಕಟಣೆಯ ಮೂಲಕ ಘೋಷಿಸಿತು.* ಈ ಸಂವಿಧಾನದ ದಿನವನ್ನು "ರಾಷ್ಟ್ರೀಯ ಕಾನೂನು ದಿನ" ಎಂದು ಸಹ ಕರೆಯಲಾಗುವುದು.* ಸಂವಿಧಾನ 1949 ನವೆಂಬರ್ 26 ರಂದು ಅಂಗೀಕಾರವಾಯಿತು, ಮತ್ತು 1950 ಜನೆವರಿ 26 ರಂದು ಸಂವಿಧಾನ ಜಾರಿಗೆ ಬಂದಿದೆ.* ಕ್ಯಾಲಿಗ್ರಾಫಿಕ್ ಕಲೆಯ ಮಾಸ್ಟರ್ ಪ್ರೇಮ್ ಬಿಹಾರಿ ನರೇನ್ ರೈಜಾಡಾ ಅವರು ಏಕಾಂಗಿಯಾಗಿ ಕೈಯಿಂದ ಭಾರತದ ಸಂವಿಧಾನವನ್ನು ಬರೆದಿದ್ದಾರೆ. ಮೂಲ ಆವೃತ್ತಿಯನ್ನು ನಂದ್ಲಾಲ್ ಬೋಸ್ ಮತ್ತು ಬೆಯೋಹರ್ ರಾಮ ಮನೋಹರ್ ಸಿನ್ಹಾ ಅವರು ಸೇರಿದಂತೆ ಶಾಂತಿನಿಕೇತನದ ಕಲಾವಿದರು ಅಲಂಕೃತಗೊಳಿಸಿದ್ದಾರೆ.* ಈ ಸಂವಿಧಾನವನ್ನು ರಚಿಸಲು ತಗೆದುಕೊಂಡ ಒಟ್ಟು ಸಮಯ 2ವರ್ಷ 11ತಿಂಗಳು 18ದಿನ ಮತ್ತು 63,96,729 ಇದರ ವೆಚ್ಚವಾಗಿದೆ.* ಭಾರತದ ಸಂವಿಧಾನವು 25 ಭಾಗ, 12 ಅನುಚ್ಚೇಧ, 5 ಅನುಬಂಧಗಳು, ಸುಮಾರು 448 ವಿಧಿಗಳನ್ನು ಒಳಗೊಂಡಿದೆ.* 2023 ರ ಸೆಪ್ಟೆಂಬರ್ ವೇಳೆಗೆ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಸಂವಿಧಾನವು 1.46 ಲಕ್ಷ ಪದಗಳನ್ನು ಒಳಗೊಂಡಿದೆ.* ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ. ಪಂಚ ವಾರ್ಷಿಕ ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ರಾಜ್ಯ ನಿರ್ದೇಶಕ ತತ್ತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ, ಸುಪ್ರೀಂ ಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್ನಿಂದ ಎರವಲು ಪಡೆಯಲಾಗಿದೆ.* ಸಂವಿಧಾನ ದಿನವು ಪ್ರಮುಖ ಉದ್ದೇಶಗಳು : => ಸಂವಿಧಾನದ ಮೌಲ್ಯಗಳ ಅರಿವು: ಭಾರತದ ಪ್ರಜೆಗಳಲ್ಲಿ ಸಂವಿಧಾನದಲ್ಲಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಂತಹ ಮೂಲಭೂತ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು.=> ಕರ್ತವ್ಯಗಳ ನೆನಪು: ನಾಗರಿಕರಿಗೆ ಅವರ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ನೆನಪಿಸುವುದು.=> ಅಂಬೇಡ್ಕರ್ಗೆ ಗೌರವ: ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವುದು.