* ವಿಶ್ವದಾದ್ಯಂತ ಪ್ರತಿವರ್ಷ ನವೆಂಬರ್ 25 ಅನ್ನು ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕಾನೂನು ಚೌಕಟ್ಟಿನಡಿ ತಡೆಯುವ ಗುರಿಯೊಂದಿಗೆ ವಿಶ್ವಸಂಸ್ಥೆ ಈ ದಿನವನ್ನು ಆಚರಿಸಲಾಗುತ್ತದೆ. * ಮಹಿಳಾ ದೌರ್ಜನ್ಯ ನಿರ್ಮೂಲನ ದಿನದ 2024 ರ ಥೀಮ್ 'ಮಹಿಳೆಯರು ಮತ್ತು ಬಾಲಕಿಯರ ಮೇಲಿನ ದೌರ್ಜನ್ಯ ನಿಗ್ರಹಕ್ಕೆ ಹೂಡಿಕೆ ಮಾಡಿ" (UNITE! Invest to pre- vent violence against women and girls) ಎಂಬುದು ಈ ವರ್ಷದ ಧೈಯವಾಕ್ಯ. * ಲಿಂಗ ಆಧಾರಿತ ಹಿಂಸಾಚಾರ, ದೈಹಿಕ, ಲೈಂಗಿಕ, ಮಾನಸಿಕ ಹಾನಿ ಅಥವಾ ಮಹಿಳೆ ಎಂಬ ಕೊರಗು, ಬೆದರಿಕೆ ಹಾಗೂ ಮಹಿಳಾ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಈ ವಿಧೇಯಕವನ್ನು ಅಂಗೀಕರಿಸಲಾಗಿತ್ತು. * 1999ರ ನವೆಂಬರ್ 25 ರಂದು ನಡೆದಿದ್ದ ಮುಖ್ಯ ಸಮಾವೇಶದಲ್ಲಿ ನವೆಂಬರ್ 25 ಅನ್ನು ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನವನ್ನಾಗಿ ಘೋಷಿಸಲಾಯಿತು.* 1930-1961 ರಲ್ಲಿ ಆಡಳಿತಗಾರ ರಾಫೆಲ್ ಟ್ರುಜಿಲ್ಲೆ ಅವರ ಸರ್ವಾಧಿಕಾರದ ವಿರುದ್ಧ ಧ್ವನಿ ಎತ್ತಿದ ಡೊಮಿನಿಕನ್ ರಿಪಬ್ಲಿಕ್ನ ಮೂವರು ರಾಜಕೀಯ ಕಾರ್ಯಕರ್ತರಾದ ಮೀರಾ ಬಲ್ ಸಹೋದರಿಯರನ್ನು 1960ರಲ್ಲಿ ಕ್ರೂರವಾಗಿ ಸರಣಾರ್ಥ ಕೊಲ್ಲಲಾಗುತ್ತದೆ. ಇವರ ಸ್ಮರಣಾರ್ಥ ಪ್ರತಿವರ್ಷ ನವೆಂಬರ್ 25ರಂದು ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವನ್ನು ಆಚರಿಸಲಾಗುತ್ತಿದೆ.* 1993ರ ಡಿಸೆಂಬರ್ 20ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 48/104 ನಿರ್ಣಯದ ಮೂಲಕ ಮಹಿಳೆಯರ ವಿರುದ್ಧ ಹಿಂಸಾಚಾರದ ನಿರ್ಮೂಲನೆ ವಿಧೇಯಕವನ್ನು ಅಂಗೀಕರಿಸಲಾಯಿತು. * 2000 ಫೆಬ್ರವರಿ 7ರಂದು ಸಾಮಾನ್ಯ ಸಭೆಯು 54/134 ಮತಗಳ ಮೂಲಕ ನಿರ್ಣಯ ಕೈಗೊಂಡಿತು. ಅಧಿಕೃತವಾಗಿ ನವೆಂಬರ್ 25 ಅನ್ನು ಮಹಿಳಾ ದೌರ್ಜನ್ಯ ನಿರ್ಮೂಲನಾ ದಿನವೆಂದು ಘೋಷಿಸಿತು. * ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿ ಪ್ರಕಾರ 2021ರಲ್ಲಿ 2021ರಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು ಶೇ.15.3ರಷ್ಟು ಹೆಚ್ಚಾಗಿವೆ. * ಭಾರತದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಶೇ. 30ಕ್ಕಿಂತ ಹೆಚ್ಚು. 2011ರಲ್ಲಿ 2,28,650ಕ್ಕೂ ಹೆಚ್ಚು ಮಹಿಳೆಯರ ಮೇಲಿನ ದೌರ್ಜನ್ಯ 4,28,278 ಪ್ರಕರಣಗಳು ವರದಿಯಾಗಿವೆ. * 2021ರಲ್ಲಿ ವಿಶ್ವಸಂಸ್ಥೆ 2030ರ ವೇಳೆಗೆ ಜಗತ್ತಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಯುಎನ್ ಐಟಿಇ ಅಭಿಯಾನವನ್ನು ಪ್ರಾರಂಭಿಸಿದೆ.