* ಪ್ರಪಂಚದಾದ್ಯಂತ ಪ್ರತಿ ವರ್ಷ ನವೆಂಬರ್ 21ರಂದು ವಿಶ್ವ ದೂರದರ್ಶನ(ಟೆಲಿವಿಷನ್) ದಿನವನ್ನು ಆಚರಿಸಲಾಗುತ್ತದೆ. * 2025ರ ವಿಶ್ವ ದೂರದರ್ಶನ ದಿನದ ಥೀಮ್ "ಎಐ ಟೆಲಿವಿಷನ್ : ಆರಂಭ ಅಥವಾ ಅಂತ್ಯ (AI TV: The beginning or the end) " ಎಂಬುವುದಾಗಿದೆ.* 1927 ರಲ್ಲಿ ಅಮೇರಿಕನ್ ಸಂಶೋಧಕ ಫಿಲೋ ಟೇಲರ್ ಫಾರ್ನ್ಸ್ವರ್ತ್ ವಿಶ್ವದ ಮೊದಲ ಎಲೆಕ್ಟ್ರಾನಿಕ್ ದೂರದರ್ಶನವನ್ನು ಕಂಡುಹಿಡಿದರು. ಆ ಬಳಿಕ ಚಾರ್ಲ್ಸ್ ಫ್ರಾನ್ಸಿಸ್ ಜೆಂಕಿನ್ಸ್ ರಚಿಸಿದ ಮೊದಲ ಮೆಕ್ಯಾನಿಕಲ್ ಟಿವಿ ಸ್ಟೇಷನ್ W3XK ತನ್ನ ಮೊದಲ ಪ್ರಸಾರವನ್ನು ಪ್ರಸಾರ ಮಾಡಿತು. ಟಿವಿಯ ಪ್ರಾಮುಖ್ಯತೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಅದು ಹೇಗೆ ಭಾಗವಹಿಸುತ್ತದೆ ಎಂಬುದನ್ನು ಚರ್ಚಿಸಲು 1996 ರಲ್ಲಿ 51/205 ನಿರ್ಣಯದ ಮೂಲಕ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ನವೆಂಬರ್ 21ನ್ನು ವಿಶ್ವ ದೂರದರ್ಶನ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 21 ರಂದು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತಿದೆ* ಅಮೆರಿಕದ ಇದೋದ ಗ್ರಾಮದ ಹವ್ಯಾಸಿ ಸಂಶೋಧಕ ಫಿಲೊ ಟೇಲರ್ ಫ್ರಾನ್ಸ್ವರ್ತ್ ಟೆಲಿವಿಷನ್ ಅನ್ನು ಮೊತ್ತ ಮೊದಲ ಬಾರಿಗೆ ಆವಿಷ್ಕರಿಸಿದ್ದರು. ಹಲವಾರು ಜನರ ಆರ್ಥಿಕ ನೆರವಿನಿಂದ ಫಿಲೊ 1934 ಆಗಸ್ಟ್ 25ರಂದು ಎಲೆಕ್ಟ್ರಾನಿಕ್ ಟೆಲಿವಿಷನ್ ಸೆಟ್ ಕಂಡು ಹಿಡಿದು, ಅದರಲ್ಲಿ ತಮ್ಮ ಪತ್ನಿಯ ಭಾವಚಿತ್ರವನ್ನು ಪ್ರಸಾರ ಮಾಡಿದ್ದರು. ಆ ಬಳಿಕ ಜಾನ್ ಲಾಗಿ ಬೇರ್ಡ್ ಎಂಬುವರು 1925ರಲ್ಲಿ ಡುಮ್ಮ ಗಾತ್ರದ ಟೆಲಿವಿಷನ್ ಕಂಡು ಹಿಡಿದು ಅದನ್ನು ಟೆಲಿವಿಸರ್ ಎಂದು ಕರೆದರು. 1930ರಲ್ಲಿ ಸಣ್ಣ ಗಾತ್ರ ಪರದೆಯ ಮತ್ತಷ್ಟು ಅತ್ಯಾಧುನಿಕವಾದ ಟೆಲಿವಿಷನ್ ಅಭಿವೃದ್ಧಿಪಡಿಸಿದರು. ಹೀಗೆ ಜನಪ್ರಿಯಗೊಳ್ಳುತ್ತಿದ್ದಂತೆ ಸಂಶೋಧಕರು ಆಧುನಿಕ ತಂತ್ರಜ್ಞಾನದೊಂದಿಗೆ ಟೆಲಿವಿಷನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾದರು.* ಇತ್ತೀಚೆಗಿನ ದಿನಗಳಲ್ಲಿ ಟಿವಿ ನೋಡುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಈ ಟೆಲಿವಿಷನ್ ಮನರಂಜನೆ, ಶಿಕ್ಷಣ, ಸುದ್ದಿ ಮತ್ತು ರಾಜಕೀಯಕ್ಕೆ ಸೇರಿದಂತೆ ಹಲವಾರು ವಿಷಯಗಳ ಕುರಿತಾದ ಮಾಹಿತಿಯನ್ನು ಒದಗಿಸುತ್ತ ಬಂದಿದೆ. * ವಿಶ್ವ ದೂರದರ್ಶನ ದಿನದ ಮಹತ್ವ- ಸಾರ್ವಜನಿಕರಿಗೆ ಶಿಕ್ಷಣ ನೀಡುವಲ್ಲಿ ಮತ್ತು ಮಾಧ್ಯಮ ಸಾಕ್ಷರತೆಯನ್ನು ಉತ್ತೇಜಿಸುವಲ್ಲಿ ಟಿವಿಯ ಪಾತ್ರ.- ಹವಾಮಾನ ಬದಲಾವಣೆ, ಮಾನವ ಹಕ್ಕುಗಳು, ಬಡತನ ಮತ್ತು ಸಾರ್ವಜನಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಶಕ್ತಿ ಇದರದು.- ಕಥೆ ಹೇಳುವಿಕೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಗಾಗಿ ಇದು ನೀಡುವ ವೇದಿಕೆ.- ಶಾಂತಿ ನಿರ್ಮಾಣ, ಪ್ರಜಾಪ್ರಭುತ್ವ ಮತ್ತು ಮಾಹಿತಿಯುಕ್ತ ಪೌರತ್ವಕ್ಕೆ ಅದರ ಕೊಡುಗೆ- ಡಿಜಿಟಲ್ ಯುಗಕ್ಕೆ ಟಿವಿ ಹೊಂದಿಕೊಂಡಂತೆ, ಸೋಸುವಿಕೆಯಿಲ್ಲದ ಸಾಮಾಜಿಕ ಮಾಧ್ಯಮ ವಿಷಯಗಳಿಂದ ತುಂಬಿ ತುಳುಕುತ್ತಿರುವ ಜಗತ್ತಿನಲ್ಲಿ ಟಿವಿ ವಿಶ್ವಾಸಾರ್ಹ ಮಾಧ್ಯಮವಾಗಿ ಮುಂದುವರೆದಿದೆ.