* ಪ್ರತಿ ವರ್ಷ ನವೆಂಬರ್ 16 ರಂದು ಭಾರತದಲ್ಲಿ ಮುಕ್ತ ಮತ್ತು ಸ್ವತಂತ್ರ ಪತ್ರಿಕಾ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ.* 2024ರ ರಾಷ್ಟ್ರೀಯ ಪತ್ರಿಕಾ ದಿನದ ಥೀಮ್ ನಿರ್ದಿಷ್ಟ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ,* ಸ್ವತಂತ್ರ ಮತ್ತು ಮುಕ್ತ ಪತ್ರಿಕಾ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದು ಕರೆಯಲಾಗುತ್ತದೆ. * ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಭಾರತವನ್ನು ಪ್ರಜಾಪ್ರಭುತ್ವವನ್ನಾಗಿಸಲು ಅದರ ಕೊಡುಗೆಯನ್ನು ಗೌರವಿಸಲು ಪತ್ರಿಕಾ ದಿನವನ್ನು ಆಚರಿಸಲಾಗುತ್ತದೆ. * ನವೆಂಬರ್ 1966 ರಲ್ಲಿ, ಭಾರತೀಯ ಮಾಧ್ಯಮ ಮತ್ತು ಪತ್ರಿಕಾ ಮಾಧ್ಯಮದ ಸರಿಯಾದ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು, ವರದಿಯ ಗುಣಮಟ್ಟವನ್ನು ಪರಿಶೀಲಿಸಲು ನ್ಯಾಯಮೂರ್ತಿ ಜೆ.ಆರ್.ಮುಧೋಲ್ಕರ್ ಅವರ ನೇತೃತ್ವದಲ್ಲಿ ಭಾರತೀಯ ಪತ್ರಿಕಾ ಆಯೋಗವನ್ನು ರಚಿಸಲಾಯಿತು. * ಜುಲೈ 4 ರಂದು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದ ನಂತರ ಅದು 1966 ನವೆಂಬರ್ 16 ರಿಂದ ಪತ್ರಿಕಾ ಮಾಧ್ಯಮ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.* ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2025 : ಕಳೆದ ವರ್ಷದಂತೆ 2025 ರಲ್ಲಿಯೂ ನಾರ್ವೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಪತ್ರಿಕಾ ಸ್ವಾತಂತ್ರ್ಯ ಸಮೀಕ್ಷೆಗಳಲ್ಲಿ ನಿರಂತರವಾಗಿ ಉನ್ನತ ಸ್ಥಾನ ಪಡೆದಿರುವ ಸ್ಕ್ಯಾಂಡಿನೇವಿಯನ್ ಮತ್ತು ಯುರೋಪಿಯನ್ ದೇಶಗಳು ಬಲವಾದ ಕಾನೂನು ರಕ್ಷಣೆಗಳು ಮತ್ತು ವೈವಿಧ್ಯಮಯ ಮಾಧ್ಯಮ ಆರ್ಥಿಕತೆಯಿಂದ ಬೆಂಬಲಿತವಾಗಿವೆ. 2025 ರಲ್ಲಿ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು ಒಟ್ಟು 32.96 ಅಂಕಗಳೊಂದಿಗೆ 151 ನೇ ಸ್ಥಾನದಲ್ಲಿದೆ , ಕಳೆದ ವರ್ಷ 159 ನೇ ಸ್ಥಾನದಲ್ಲಿದ್ದ ಭಾರತವು 8 ಸ್ಥಾನಗಳ ಏರಿಕೆ ಕಂಡಿದೆ.* 2025 ರಲ್ಲಿ ಅತ್ಯುತ್ತಮ ಪತ್ರಿಕಾ ಸ್ವಾತಂತ್ರ್ಯ ಹೊಂದಿರುವ ಟಾಪ್ 3 ದೇಶಗಳು1 ನಾರ್ವೇ 92.31 2 ಎಸ್ಟೋನಿಯಾ 89.46 3 ನೆದರ್ಲ್ಯಾಂಡ್ಸ್ 88.64 * 2025 ರಲ್ಲಿ ಪತ್ರಿಕಾ ಸ್ವಾತಂತ್ರ್ಯ ಅತ್ಯಂತ ಕಳಪೆಯಾಗಿದ್ದ 3 ದೇಶಗಳು180 ಏರಿಟ್ರಿಯಾ 11.32179 ಉತ್ತರ ಕೊರಿಯಾ 12.64 178 ಚೀನಾ 14.8