* ಸಹಿಷ್ಣುತೆ ಮತ್ತು ತಾರತಮ್ಯದಂತಹ ನಕಾರಾತ್ಮಕ ಭಾವನೆಗಳನ್ನು ತೊಡೆದುಹಾಕಲು ಹಾಗೂ ಸಹಿಷ್ಣುತೆ ಮತ್ತು ಅಹಿಂಸೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನು ಆಚರಿಸಲಾಗುತ್ತದೆ. * ಮಹಾತ್ಮಾ ಗಾಂಧಿಯವರ 125 ನೇ ಜನ್ಮದಿನದ ಸಂದರ್ಭದಲ್ಲಿ ಯುನೈಟೆಡ್ ನ್ಯಾಶನಲ್ ಜನರಲ್ ಅಸೆಂಬ್ಲಿಯು 1995 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಹಿಷ್ಣುತೆಯ ವರ್ಷವೆಂದು ಘೋಷಿಸಿತು. ಅದೇ ವರ್ಷ ಜಗತ್ತಿನಲ್ಲಿ ಅಹಿಂಸೆ ಮತ್ತು ಸಹಿಷ್ಣುತೆಯ ಜಾಗೃತಿಯನ್ನು ಉತ್ತೇಜಿಸುವುದರೊಂದಿಗೆ “ಯುನೆಸ್ಕೋ ಮದನ್‌ಜಿತ್ ಸಿಂಗ್ ಪ್ರಶಸ್ತಿ” ನೀಡಲು ಮುಂದಾಯಿತು. ಆ ಬಳಿಕ 1996 ರಲ್ಲಿ, ಯುನೈಟೆಡ್ ನ್ಯಾಶನಲ್ ಜನರಲ್ ಅಸೆಂಬ್ಲಿಯು ನವೆಂಬರ್ 16 ರಂದು ಅಂತಾರಾಷ್ಟ್ರೀಯ ಸಹಿಷ್ಣುತೆ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಜಾಗತಿಕ ಮಟ್ಟದಲ್ಲಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.* ದಿನವನ್ನು ಆಚರಿಸುವ ಮಹತ್ವವು ಸಹಿಷ್ಣುತೆ ಮತ್ತು ಸಂಸ್ಕೃತಿಗಳು ಮತ್ತು ಸಾಮಾಜಿಕ-ಆರ್ಥಿಕ ಗುಂಪುಗಳ ಮೇಲೆ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವುದು. ಜಗತ್ತನ್ನು ಬದುಕಲು ಉತ್ತಮ ಸ್ಥಳವನ್ನಾಗಿ ಮಾಡಲು ಸಹಿಷ್ಣುತೆಯನ್ನು ವೈಯಕ್ತಿಕ ಮತ್ತು ವೃತ್ತಿಪರ ಮಟ್ಟದಲ್ಲಿ ಉತ್ತೇಜಿಸಬೇಕು. ಸಹಬಾಳ್ವೆಗೆ ಸಹಿಷ್ಣುತೆ ಮತ್ತು ಅಹಿಂಸೆ ಅತ್ಯಗತ್ಯ ಮಾನದಂಡಗಳಾಗಿವೆ. * ಅನೇಕ ದೃಷ್ಟಿಕೋನಗಳು, ಜನಾಂಗಗಳು, ನಂಬಿಕೆಗಳು ಮತ್ತು ಸಿದ್ಧಾಂತಗಳ ಸೌಂದರ್ಯವನ್ನು ಜನರು ಪ್ರಶಂಸಿಸುವಂತೆ ಮಾಡುವುದು ಈ ದಿನದ ಗುರಿಯಾಗಿದೆ.