* ಗೃಹ ಸಚಿವರಾದ ಅಮಿತ್ ಶಾ ರವರು ಶಾಸಕಾಂಗ ಕರಡು ರಚನೆಯ ತರಬೇತಿ ಕಾರ್ಯಕ್ರಮವನ್ನು ಹೊಸದಿಲ್ಲಿಯಲ್ಲಿ ಉದ್ಘಾಟಿಸಲಾಗಿದ್ದು, ಸಂಸತ್ತು, ರಾಜ್ಯ ಶಾಸಕಾಂಗಗಳು, ವಿವಿಧ ಸಚಿವಾಲಯಗಳು, ಶಾಸನಬದ್ಧ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಡುವೆ ಶಾಸಕಾಂಗ ಕರಡು ರಚನೆಯ ತತ್ವಗಳು ಮತ್ತು ಅಭ್ಯಾಸಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಒಳಗೊಂಡಿದೆ.* ಶಾಸಕಾಂಗ ಕರಡು ರಚನೆಯು ತರಬೇತಿ ಕಾರ್ಯಕ್ರಮದಲ್ಲಿ ಕೇವಲ ವಿಜ್ಞಾನ ಅಥವಾ ಕಲೆ ಮಾತ್ರವಲ್ಲದೆ, ಸ್ಪಷ್ಟತೆ ಮತ್ತು ಪಾರದರ್ಶಕತೆಯ ಮನೋಭಾವದಿಂದ ಕಾರ್ಯಗತಗೊಳಿಸಬೇಕಾದ ಕೌಶಲ್ಯವಾಗಿದೆ ಎಂದು ಅಮಿತ್ ಶಾ ರವರು ಪ್ರಸ್ತಾಪಿಸಿದರು.