* ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದ ದಾಳಿಯ ಮರುದಿನವೇ ಹಿರಿಯ ಐಪಿಎಸ್ ಅಧಿಕಾರಿ ಸತೀಶ್ ಗೋಲ್ಚಾ ಅವರನ್ನು ನಗರದ ಹೊಸ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.* 1992ರ ಬ್ಯಾಚ್ನ ಅಧಿಕಾರಿ ಗೋಲ್ಚಾ ಅವರು ತಿಹಾರ ಜೈಲಿನ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ), ಗುಪ್ತಚರ ವಿಶೇಷ ಆಯುಕ್ತ ಹಾಗೂ ಅರುಣಾಚಲ ಪ್ರದೇಶದ ಡಿಜಿಪಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.* ಸಿವಿಲ್ ಲೈನ್ಸ್ನ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆದ ‘ಜನ ಸಂವಾದ’ ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು ಅಚಾನಕ್ ದಾಳಿ ನಡೆಸಿದ್ದು, ಪೊಲೀಸರು ಆತನನ್ನು ತಕ್ಷಣ ಬಂಧಿಸಿದ್ದಾರೆ.* ಗುಜರಾತ್ನ ರಾಜ್ಕೋಟ್ ಮೂಲದ ಸಕರಿಯಾ ರಾಜೇಶ್ಭಾಯಿ ಖಿಮ್ಜಿಭಾಯಿ (41) ಎಂಬ ವ್ಯಕ್ತಿ ಆರೋಪಿಯಾಗಿದ್ದು, ಕೊಲೆ ಯತ್ನ ಸೇರಿದಂತೆ ಸರ್ಕಾರ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಆತನ ವಿರುದ್ಧ ದೂರು ದಾಖಲಾಗಿದೆ. ಸದ್ಯ ಆತನು 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ.