Job Description: ➤ ಈಶಾನ್ಯ ಭಾರತದ ರಾಜ್ಯಗಳು ಇತ್ತೀಚೆಗೆ ಪರಿಸರಸ್ನೇಹಿ ಮತ್ತು ಕೃಷಿ ಆಧಾರಿತ ಅಭಿವೃದ್ಧಿ ಯೋಜನೆಗಳಿಂದಾಗಿ ಸುದ್ದಿಯಲ್ಲಿವೆ. ಇದರ ಮುಂದುವರಿದ ಭಾಗವಾಗಿ, ಮೇಘಾಲಯ ರಾಜ್ಯದಲ್ಲಿ ಈಶಾನ್ಯ ಭಾರತದ ಅತ್ಯಂತ ದೊಡ್ಡ ಸಾವಯವ ಸಾಂಬಾರ ಪದಾರ್ಥಗಳ ಸಂಸ್ಕರಣಾ ಘಟಕವನ್ನು (Northeast's Largest Organic Spice Processing Plant) ಉದ್ಘಾಟಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೇಘಾಲಯದ ರಿ-ಭೋಯ್ ಜಿಲ್ಲೆಯ ಭೋಯಿರಿಂಬೊಂಗ್‌ನಲ್ಲಿ ಈ ಅತ್ಯಾಧುನಿಕ ಘಟಕಕ್ಕೆ ಚಾಲನೆ ನೀಡಿದ್ದಾರೆ. ➤ ಈ ಘಟಕವನ್ನು 'ಈಸ್ಟರ್ನ್ ರಿ-ಭೋಯ್ ಆರ್ಗಾನಿಕ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ' (Eastern Ri Bhoi Organic Farmer Producer Company) ಮುನ್ನಡೆಸುತ್ತಿದೆ.ವರ್ಷಕ್ಕೆ ಬರೋಬ್ಬರಿ 10,346 ಮೆಟ್ರಿಕ್ ಟನ್ (MT) ಸಾವಯವ ಸಾಂಬಾರ ಪದಾರ್ಥಗಳನ್ನು ಸಂಸ್ಕರಿಸುವ ಬೃಹತ್ ಸಾಮರ್ಥ್ಯವನ್ನು ಇದು ಹೊಂದಿದೆ.➤ ಈ ಯೋಜನೆಯ ಉದ್ದೇಶ ಮತ್ತು ಮಹತ್ವ: ಮೌಲ್ಯವರ್ಧನೆ (Value Addition): ಮೇಘಾಲಯದಲ್ಲಿ ಸಾವಯವ ಕೃಷಿ ಅತ್ಯಂತ ಪ್ರಮುಖ ವಲಯವಾಗಿದೆ. ಈ ಘಟಕವು ಕೃಷಿ ಉತ್ಪನ್ನಗಳಿಗೆ ಸೂಕ್ತ ಸಂಸ್ಕರಣೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಮೌಲ್ಯವರ್ಧನೆ ನೀಡಲು ಸಹಾಯ ಮಾಡುತ್ತದೆ. ಮಾರುಕಟ್ಟೆ ಸಂಪರ್ಕ: ರೈತರ ಹೊಲ ಹಾಗೂ ವಾಣಿಜ್ಯ ಮಾರುಕಟ್ಟೆಗಳ ನಡುವೆ ಇದ್ದ ದೀರ್ಘಾವಧಿಯ ಅಂತರವನ್ನು (Gap) ಕಡಿಮೆ ಮಾಡಿ, ರೈತರಿಗೆ ನೇರ ಆದಾಯ ತಂದುಕೊಡುವುದು ಇದರ ಮುಖ್ಯ ಗುರಿಯಾಗಿದೆ. ಈಶಾನ್ಯ ಭಾರತದ ಕೃಷಿ ಕ್ರಾಂತಿ: ಸಿಕ್ಕಿಂ ಮಾದರಿಯಲ್ಲಿಯೇ ಮೇಘಾಲಯ ಸೇರಿದಂತೆ ಇಡೀ ಈಶಾನ್ಯ ಭಾರತವನ್ನು ಸಾವಯವ ಕೃಷಿಯ ಹಬ್ (Organic Hub) ಮಾಡಲು ಈ ಯೋಜನೆ ಮೈಲಿಗಲ್ಲಾಗಲಿದೆ. ➤ ಮೇಘಾಲಯದ ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳು: ಹಣಕಾಸು ಸಚಿವರ ಭೇಟಿಯ ವೇಳೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರ ಸಮ್ಮುಖದಲ್ಲಿ 1,200 ಕೋಟಿ ರೂ.ಗಿಂತಲೂ ಹೆಚ್ಚಿನ ಮೌಲ್ಯದ 4 ಪ್ರಮುಖ ಬಾಹ್ಯ ನೆರವು ಯೋಜನೆಗಳಿಗೆ (Externally Aided Projects - EAPs) ಶಂಕುಸ್ಥಾಪನೆ ನೆರವೇರಿಸಲಾಯಿತು: ಮೇಘಾಲಯ ಲಾಜಿಸ್ಟಿಕ್ಸ್ ಮತ್ತು ಕನೆಕ್ಟಿವಿಟಿ ಇಂಪ್ರೂವ್ಮೆಂಟ್ ಪ್ರಾಜೆಕ್ಟ್ (MLCIP) ಮೇಘಾಲಯ ಪರಿಸರ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಸಮಗ್ರ ಪರಿಸರ ಪ್ರವಾಸೋದ್ಯಮ ಮತ್ತು ಸುಸ್ಥಿರ ಕೃಷಿ ಆಧಾರಿತ ಜೀವನೋಪಾಯ ಅಭಿವೃದ್ಧಿ ಯೋಜನೆ ಮೇಘಾಲಯದಲ್ಲಿ ಮಾನವ ಬಂಡವಾಳ ಅಭಿವೃದ್ಧಿ ಬೆಂಬಲದ 2ನೇ ಹಂತ (Phase II of Supporting Human Capital Development)ಇನ್ನು ಹೆಚ್ಚಿನ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ