* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2025 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize 2025) ಸುಸುಮು ಕಿಟಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಘಿ ಅವರಿಗೆ ನೀಡಲು ನಿರ್ಧರಿಸಿದೆ. ಈ ಪ್ರಶಸ್ತಿಯನ್ನು ಈ ಬಾರಿ ಮೂವರು ವಿಜ್ಞಾನಿಗಳು ಪಡೆದುಕೊಂಡಿದ್ದಾರೆ.* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುವ ನೊಬೆಲ್ ಪ್ರಶಸ್ತಿಯನ್ನು ಆಯಾ ಕ್ಷೇತ್ರದಲ್ಲಿ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ.* ಮೆಟಲ್ ಆರ್ಗಾನಿಕ್ ಫ್ರೇಮ್ವರ್ಕ್ ಅಭಿವೃದ್ಧಿ ಕ್ಷೇತ್ರದ ಅವರ ಸಾಧನೆಗಾಗಿ ಈ ಬಾರಿಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. * ಕಳೆದ ವರ್ಷದ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯು ಕಂಪ್ಯೂಟೇಶನಲ್ ಪ್ರೋಟೀನ್ ವಿನ್ಯಾಸ ಮತ್ತು ಪ್ರೋಟೀನ್ ರಚನೆಯ ಮುನ್ಸೂಚನೆಯಲ್ಲಿನ ಪ್ರಗತಿಯ ಕ್ಷೇತ್ರದಲ್ಲಿನ ಸಾಧನೆಗೆ ನೀಡಲಾಗಿತ್ತು. ಇದು ಔಷಧ ಮತ್ತು ಜೈವಿಕ ತಂತ್ರಜ್ಞಾನದಲ್ಲಿ ನಾವೀನ್ಯತೆಗೆ ಉತ್ತೇಜನ ನೀಡಿದ ಕ್ಷೇತ್ರಗಳಾಗಿತ್ತು.* 2025ರ ನೊಬೆಲ್ ಪ್ರಶಸ್ತಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (SEK) ಮೊತ್ತವನ್ನು ನಿಗದಿಪಡಿಸಲಾಗಿದೆ. ಸ್ವೀಡಿಷ್ ಕ್ರೋನರ್ (SEK) ಎಂಬುದು ನೊಬೆಲ್ ಪ್ರಶಸ್ತಿಗಳನ್ನು ನೀಡುವ ಸ್ವೀಡನ್ನ ಕರೆನ್ಸಿಯಾಗಿದೆ. 11 ಮಿಲಿಯನ್ ಸ್ವೀಡಿಷ್ ಕ್ರೋನರ್ ಮೊತ್ತವು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 10.38 ಕೋಟಿ ರೂ.ಗಳಷ್ಟಾಗುತ್ತದೆ.