* ಭೌತಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿಯನ್ನು (Nobel Prize in Physics) ಘೋಷಿಸಲಾಗಿದೆ. ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಜಾನ್ ಕ್ಲಾರ್ಕ್, ಮೈಕೆಲ್ ಹೆಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ ನೀಡಲಾಗಿದೆ. ಕ್ವಾಂಟಮ್ ಮೆಕ್ಯಾನಿಕ್ಸ್ ಕ್ಷೇತ್ರದ ನೂತನ ಆವಿಷ್ಕಾರಕ್ಕಾಗಿ ಈ ಪ್ರಶಸ್ತಿಯನ್ನು ನೀಡಲು ನಿರ್ಧರಿಸಲಾಗಿದೆ. * ಸೋಮವಾರ (ಅ. 6) ನೊಬೆಲ್ ಪ್ರಶಸ್ತಿ ಸಮಿತಿಯು ಶರೀರಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ (Nobel Prize in Medicine) ವಿಜೇತರನ್ನು ಘೋಷಿಸಿದೆ. ಬಾಹ್ಯ ರೋಗನಿರೋಧಕ ಸಹಿಷ್ಣುತೆಗೆ ಸಂಬಂಧಿಸಿದ ಸಂಶೋಧನೆಗಳಿಗಾಗಿ ಮೇರಿ ಇ. ಬ್ರಂಕೋವ್, ಫ್ರೆಡ್ ರಾಮ್ಸ್ಡೆಲ್ ಮತ್ತು ಶಿಮೊನ್ ಸಕಾಗುಚಿ ಅವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.=> 83 ವರ್ಷದ ಬ್ರಿಟನ್ ಮೂಲದ ಜಾನ್ ಕ್ಲಾರ್ಕ್ ಅವರು ಬಕ್ರ್ಲಿಯಲ್ಲಿರುವ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದು, 1968ರಲ್ಲಿಕೇಂಬ್ರಿಜ್ ವಿಶ್ವಧಿವಿದ್ಯಾಲಯದಿಂದ ಪಿಎಚ್ ಡಿ ಪಡೆದಿದ್ದಾರೆ. => ಫ್ರಾನ್ಸ್ ಮೂಲದ ಮೈಕೆಲ್ ಎಚ್ . ಡೆವೊರೆಟ್ ಅವರು ಯೇಲೆ ವಿಶ್ವವಿದ್ಯಾಲಯ ಹಾಗೂ ಸ್ಯಾಂಟಾ ಬಾರ್ಬರಾದ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿದ್ದು, 1982ರಲ್ಲಿಪ್ಯಾರಿಸ್ -ಸುಡ್ ವಿಶ್ವವಿದ್ಯಾಲಯಧಿದಿಂದ ಪಿಎಚ್ ಡಿ ಪದವಿ ಪಡೆದರು. => ಜಾನ್ ಎಂ. ಮಾರ್ಟಿನಿಸ್ ಅವರು ಸ್ಯಾಂಟಾ ಬಾರ್ಬರಾದ ಕ್ಯಾಲಿಧಿಫೋರ್ನಿಯಾ ವಿಶ್ವವಿದ್ಯಾಲಯ ಪ್ರೊಫೆಸರ್ ಆಗಿದ್ದು, 1987ರಲ್ಲಿಬಕ್ರ್ಲಿ ಕ್ಯಾಲಿಫೋರ್ನಿಯಾ ವಿಶ್ವಧಿವಿದ್ಯಾಧಿಲಯದಿಂದ ಪಿಎಚ್ ಡಿ ಪಡೆದಿದ್ದಾರೆ. * ನೊಬೆಲ್ ಪ್ರಶಸ್ತಿ ಸಂಸ್ಥಾಪಕ ಆಲ್ಫ್ರೆಡ್ ನೊಬೆಲ್ ಅವರ ಪುಣ್ಯತಿಥಿಯಾದ ಡಿ.10ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.* 1901 ರಿಂದ 2024ರವರೆಗೆ, ಭೌತಶಾಸ್ತ್ರದಲ್ಲಿ 118 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. 227 ಭೌತಶಾಸ್ತ್ರ ವಿಜೇತರಲ್ಲಿ 1903ರಲ್ಲಿ ಮೇರಿ ಕ್ಯೂರಿ ಸೇರಿದಂತೆ ಐವರು ಮಹಿಳೆಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.* 2025ರ ನೊಬೆಲ್ ಪ್ರಶಸ್ತಿಗೆ 11 ಮಿಲಿಯನ್ ಸ್ವೀಡಿಷ್ ಕ್ರೋನರ್ (SEK) ಮೊತ್ತವನ್ನು ನಿಗದಿಪಡಿಸಲಾಗಿದೆ. ಸ್ವೀಡಿಷ್ ಕ್ರೋನರ್ (SEK) ಎಂಬುದು ನೊಬೆಲ್ ಪ್ರಶಸ್ತಿಗಳನ್ನು ನೀಡುವ ಸ್ವೀಡನ್ನ ಕರೆನ್ಸಿಯಾಗಿದೆ. 11 ಮಿಲಿಯನ್ ಸ್ವೀಡಿಷ್ ಕ್ರೋನರ್ ಮೊತ್ತವು ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 10.38 ಕೋಟಿ ರೂ.ಗಳಷ್ಟಾಗುತ್ತದೆ.