Job Description: * 2024ರ ನೊಬೆಲ್ ಪ್ರಶಸ್ತಿಗಳ(Nobel Prize 2024) ಘೋಷಣೆ ಅಕ್ಟೋಬರ್ 7 (ಸೋಮವಾರ) ರಿಂದ ಆರಂಭವಾಗಿದ್ದು, ಈ ಘೋಷಣೆಯನ್ನು ಸ್ಟಾಕ್‌ಹೋಮ್ನನ ಕರೋಲಿನ್‌ಸ್ಯಾ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ನೊಬೆಲ್ ಅಸೆಂಬ್ಲಿ ಇದನ್ನು ಘೋಷಿಸಿತು.* ಕರೋಲಿನ್‌ಸ್ಕಾ ಇನ್‌ಸ್ಟಿಟ್ಯೂಟ್‌ನಲ್ಲಿರುವ ನೊಬೆಲ್ ಅಸೆಂಬ್ಲಿಯು ವಂಶವಾಹಿ ನಿಯಂತ್ರಣದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಮೈಕ್ರೊಆರ್‌ಎನ್‌ಎ ಮತ್ತು ಪೋಸ್ಟ್-ಟ್ರಾನ್ಸಿಪ್ಪನಲ್ ಜೀನ್ ನಿಯಂತ್ರಣದಲ್ಲಿ ಮೈಕ್ರೊಆರ್‌ಎನ್‌ಎ ಪಾತ್ರದ ಅಧ್ಯಯನಕ್ಕಾಗಿ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ಜಂಟಿಯಾಗಿ 2024 ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. * ಈ ವರ್ಷದ ನೊಬೆಲ್ ಪ್ರಶಸ್ತಿಯು ಜೀನ್ ಚಟುವಟಿಕೆಯನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಆ ನಿಯಂತ್ರಣದ ಮೂಲಭೂತ ತತ್ವವನ್ನು ಕಂಡುಹಿಡಿದ ಸಾಧನೆಗಾಗಿ ಈ ಇಬ್ಬರು ವಿಜ್ಞಾನಿಗಳನ್ನು ನೊಬೆಲ್ ಪ್ರಶಸ್ತಿ ನೀಡಿಗೌರವಿಸುತ್ತದೆ. * ವಿಕ್ಟರ್ ಅಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರು ವಿವಿಧ ಕೋಶ ಪ್ರಕಾರಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಎಂಬುದರ ಬಗ್ಗೆ ಅಧ್ಯಯನವನ್ನು ಮಾಡಿದ್ದಾರೆ.* ಇದು ವಂಶವಾಹಿ ನಿಯಂತ್ರಣದಲ್ಲಿ ಪಾತ್ರವನ್ನು ವಹಿಸುವ ಸಣ್ಣ ಆರ್‌ಎನ್‌ಎ ಅಣುಗಳ ಹೊಸ ವರ್ಗವಾದ ಮೈಕ್ರೋಆರ್‌ಎನ್‌ಎಯನ್ನು ಈ ವಿಜ್ಞಾನಿಗಳು ಕಂಡುಹಿಡಿದ್ದಾರೆ. ಈ ಸಂಶೋಧನೆ ಜೀನ್ ನಿಯಂತ್ರಣದ ಸಂಪೂರ್ಣ ಹೊಸ ರೂಪವನ್ನು ಪಡೆಯುತ್ತದೆ ಎಂಬುದು ಈ ವಿಜ್ಞಾನಿಗಳ ವಾದವಾಗಿದೆ. * ಮಾನವರು ಸೇರಿದಂತೆ ಬಹುಕೋಶೀಯ ಜೀವಿಗಳಿಗೆ ಈ ಸಂಶೋಧನೆ ಉಪಯುಕ್ತ ಎಂದು ಹೇಳಿದೆ. ಒಂದು ಸಾವಿರಕ್ಕೂ ಹೆಚ್ಚು ಮೈಕ್ರೊಆರ್‌ಎನ್‌ಎಗಳಿಗೆ ಮಾನವ ಜೀನೋಮ್ ಸಂಕೇತಗಳು ಎಂದು ಈಗಾಗಲೇ ಈ ಸಂಶೋಧನೆಯಲ್ಲಿ ತಿಳಿಸಲಾಗಿದೆ.* "ನಮ್ಮ ಕ್ರೋಮೋಸೋಮ್ಗಳಲ್ಲಿ ಸಂಗ್ರಹವಾಗಿರುವ ಮಾಹಿತಿಯನ್ನು ನಮ್ಮ ದೇಹದ ಎಲ್ಲಾ ಜೀವಕೋಶಗಳಿಗೆ ಸೂಚನೆ ಕೈಪಿಡಿಗೆ ಹೋಲಿಸಬಹುದು. ಪ್ರತಿಯೊಂದು ಜೀವಕೋಶವು ಒಂದೇ ರೀತಿಯ ಕ್ರೋಮೋಸೋಮ್ಗಳನ್ನು ಹೊಂದಿರುತ್ತದೆ, ಆದ್ದರಿಂದ ಪ್ರತಿ ಜೀವಕೋಶವು ನಿಖರವಾಗಿ ಒಂದೇ ರೀತಿಯ ಜೀನ್ಗಳನ್ನು ಮತ್ತು ನಿಖರವಾಗಿ ಒಂದೇ ರೀತಿಯ ಸೂಚನೆಗಳನ್ನು ಹೊಂದಿರುತ್ತದೆ" ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.* ಜೀವಿಗಳು ಹೇಗೆ ಅಭಿವೃದ್ಧಿ ಹೊಂದುತ್ತವೆ ಮತ್ತು ಕಾರ್ಯನಿರ್ವಹಿಸುತ್ತವೆ ಬಗ್ಗೆಯೂ ಈ ಮೈಕ್ರೊಆರ್‌ಎನ್‌ಎ ತಿಳಿಸುತ್ತದೆ. * ಅಕ್ಟೋಬರ್ 7 ರಿಂದ 14 ರವರೆಗೆ ಈ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವು ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ ಸಂಬಂಧಸಿದಂತೆ ಮೊದಲ ಪ್ರಶಸ್ತಿಯನ್ನು ನೀಡಲಾಗಿದೆ.* ನೊಬೆಲ್ ಪ್ರಶಸ್ತಿಯನ್ನು ಸ್ವೀಡಿಷ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಈ ಪ್ರಶಸ್ತಿಯನ್ನು ಪರಿಚಯಿಸಿದರು. 2023 ರ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕೋ ಮತ್ತು ಡ್ರೂ ವೈಸ್ಮನ್ ಅವರಿಗೆ COVID-19 ವಿರುದ್ಧ ಪರಿಣಾಮಕಾರಿ mRNA ಲಸಿಕೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.* ಇದೇ ಅಕ್ಟೋಬರ್‌ 9ರಂದು ರಸಾಯನಶಾಸ್ತ್ರ ವಿಭಾಗದ ನೊಬೆಲ್‌ ಪ್ರಕಟಿಸಲಾಗುತ್ತದೆ. ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ವಿಜ್ಞಾನಗಳ ಪ್ರಶಸ್ತಿ ವಿಜೇತರನ್ನು ಕ್ರಮವಾಗಿ ಅಕ್ಟೋಬರ್ 10, ಅಕ್ಟೋಬರ್ 11 ಮತ್ತು ಅಕ್ಟೋಬರ್ 14 ರಂದು ಘೋಷಿಸಲಾಗುತ್ತದೆ.* ವಿಕ್ಟರ್ ಆಂಬೋಸ್ ಅವರು 1979-1985ವರೆಗೆ ಪೋಸ್ಟ್‌ಡಾಕ್ಟರಲ್ ಸಂಶೋಧನೆಯನ್ನು ನಡೆಸಿದರು. ಈಗ ವೋರ್ಸೆಸ್ಟರ್, MA ಯುನಿವರ್ಸಿಟಿ ಆಫ್ ಮ್ಯಾಸಚೂಸೆಟ್ಸ್ ವೈದ್ಯಕೀಯ ಶಾಲೆಯಲ್ಲಿ ನೈಸರ್ಗಿಕ ವಿಜ್ಞಾನಗಳ ಸಿಲ್ವರ್ಮ್ಯಾನ್ ಪ್ರೊಫೆಸರ್ ಆಗಿದ್ದಾರೆ.* ಗ್ಯಾರಿ ರುವುನ್ ಅವರು 1982-1985 ರಿಂದ ಮ್ಯಾಸಚೂಸೆಟ್ಸ್ ಇನ್‌ಸ್ಕ್ರಿಟ್ಯೂಟ್ ಆಫ್‌ ಟೆಕ್ನಾಲಜಿ (MIT), ಕೇಂಬ್ರಿಡ್ಜ್, MA ನಲ್ಲಿ ಪೋಸ್ಟ್ ಡಾಕ್ಟರಲ್ ಫೆಲೋ ಆಗಿದ್ದರು. 1985ರಲ್ಲಿ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆ ಮತ್ತು ಹಾರ್ವರ್ಡ್ ವೈದ್ಯಕೀಯ ಶಾಲೆಯಲ್ಲಿ ಪ್ರಧಾನ ತನಿಖಾಧಿಕಾರಿಯಾದರು.