Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಮಹಿಳಾ ಮೀಸಲಾತಿ ಹೆಸರಲ್ಲಿ ಪತಿಯ ದರ್ಬಾರ್ಗೆ ಬ್ರೇಕ್: ಶುರುವಾಯ್ತು 'Say No To Proxy Sarpanch' ಅಭಿಯಾನ!
Authored by:
Akshata Halli
Date:
10 ಮಾರ್ಚ್ 2026
➤
ನವದೆಹಲಿ:
ಗ್ರಾಮೀಣ ಆಡಳಿತದಲ್ಲಿ ಮಹಿಳಾ ಪ್ರತಿನಿಧಿಗಳ ಹೆಸರಿನಲ್ಲಿ ಅವರ ಪತಿ ಅಥವಾ ಪುರುಷ ಸಂಬಂಧಿಗಳು ಅಧಿಕಾರ ಚಲಾಯಿಸುವ
'ಸರ್ಪಂಚ್ ಪತಿ'
(Sarpanch Pati) ಸಂಸ್ಕೃತಿಗೆ ಕಡಿವಾಣ ಹಾಕಲು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು
‘ಸೇ ನೋ ಟು ಪ್ರಾಕ್ಸಿ ಸರ್ಪಂಚ್’ (Say No To Proxy Sarpanch)
ಎಂಬ ರಾಷ್ಟ್ರಮಟ್ಟದ ಅಭಿಯಾನಕ್ಕೆ ಚಾಲನೆ ನೀಡಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಆರಂಭವಾಗಿರುವ ಈ ಅಭಿಯಾನವು
ಮಾರ್ಚ್ 18, 2026
ರವರೆಗೆ ನಡೆಯಲಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿದೆ.
➤ '
ಸರ್ಪಂಚ್ ಪತಿ' ಅಥವಾ 'ಪ್ರಾಕ್ಸಿ' ಸಂಸ್ಕೃತಿ:
ಭಾರತದ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗಿದ್ದರೂ, ಅನೇಕ ಗ್ರಾಮಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಪತಿ, ಸಹೋದರ ಅಥವಾ ಇತರ ಪುರುಷ ಸಂಬಂಧಿಗಳು ಆಡಳಿತ ನಡೆಸುತ್ತಾರೆ. ಇವರನ್ನು 'ಸರ್ಪಂಚ್ ಪತಿ', 'ಪ್ರಧಾನ್ ಪತಿ' ಅಥವಾ 'ಮುಖಿಯಾ ಪತಿ' ಎಂದು ಕರೆಯಲಾಗುತ್ತದೆ. ಇದನ್ನು
'ಪ್ರಾಕ್ಸಿ ಲೀಡರ್ಶಿಪ್' (ಪರೋಕ್ಷ ನಾಯಕತ್ವ)
ಎನ್ನಲಾಗುತ್ತದೆ.
➤
ಚುನಾಯಿತ ಮಹಿಳಾ ಪ್ರತಿನಿಧಿಗಳ ಅಧಿಕಾರವನ್ನು ಪುರುಷರು ಬಳಸುವ ‘ಸರ್ಪಂಚ್ ಪತಿ’ ಸಂಸ್ಕೃತಿಯನ್ನು ತೊಡೆದುಹಾಕಿ, ಮಹಿಳೆಯರು ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ಆಡಳಿತ ನಡೆಸುವಂತೆ ಸಬಲೀಕರಣಗೊಳಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
➤
ಸರ್ಕಾರದ ಕಠಿಣ ಕ್ರಮಗಳು ಮತ್ತು ಶಿಫಾರಸುಗಳು:
ಪಂಚಾಯತ್ ರಾಜ್ ಸಚಿವಾಲಯವು ರಚಿಸಿರುವ ಸಲಹಾ ಸಮಿತಿಯು ಈ ಕೆಳಗಿನ ಪ್ರಮುಖ ಕ್ರಮಗಳನ್ನು ಶಿಫಾರಸು ಮಾಡಿದೆ:
- ದಂಡ ವಿಧಿಸುವುದು:
ಪ್ರಾಕ್ಸಿ ಆಡಳಿತ ಸಾಬೀತಾದಲ್ಲಿ ಅಂತಹ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ದಂಡ ವಿಧಿಸುವುದು.
- ವರದಿ ಮಾಡುವ ವ್ಯವಸ್ಥೆ:
ರಹಸ್ಯವಾಗಿ ದೂರು ನೀಡಲು ಹೆಲ್ಪ್ಲೈನ್ ಮತ್ತು ಮಹಿಳಾ ಕಾವಲು ಸಮಿತಿಗಳ ಸ್ಥಾಪನೆ.
- ಸಹಾಯಧನ/ಬಹುಮಾನ:
ಪ್ರಾಕ್ಸಿ ಆಡಳಿತದ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ 'ವಿಸ್ಲ್ ಬ್ಲೋವರ್' (Whistleblower) ಬಹುಮಾನ ನೀಡುವುದು.
- ತರಬೇತಿ:
ಮಹಿಳಾ ಪ್ರತಿನಿಧಿಗಳ ಆಡಳಿತಾತ್ಮಕ ಕೌಶಲ್ಯ ವೃದ್ಧಿಸಲು ನಾಯಕತ್ವ ತರಬೇತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುವುದು.
➤
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಅಂಶಗಳು:
ಅಭಿಯಾನದ ಹೆಸರು:
ಸೇ ನೋ ಟು ಪ್ರಾಕ್ಸಿ ಸರ್ಪಂಚ್ (Say No To Proxy Sarpanch)
ಆರಂಭಿಸಿದ ಸಚಿವಾಲಯ:
ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ (MoPR)
ಸಮಯಾವಧಿ:
ಮಾರ್ಚ್ 8 ರಿಂದ ಮಾರ್ಚ್ 18, 2026
73ನೇ ಸಂವಿಧಾನ ತಿದ್ದುಪಡಿ (1992):
ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡಿತು.
ಮಹಿಳಾ ಮೀಸಲಾತಿ:
ಸಂವಿಧಾನದ 243-D ವಿಧಿಯಡಿ ಪಂಚಾಯತ್ಗಳಲ್ಲಿ ಮಹಿಳೆಯರಿಗೆ ಕನಿಷ್ಠ 1/3 ಭಾಗ ಮೀಸಲಾತಿ ಇದೆ (ಕರ್ನಾಟಕದಲ್ಲಿ ಇದು 50% ಇದೆ).
ಪಂಚಾಯತ್ ರಾಜ್ ದಿನ:
ಪ್ರತಿ ವರ್ಷ ಏಪ್ರಿಲ್ 24 ರಂದು ಆಚರಿಸಲಾಗುತ್ತದೆ.
Take Quiz
Loading...