* ಒಡಿಶಾದ ನಂದನಕಾನನ ಜೈವಿಕ ಉದ್ಯಾನದಲ್ಲಿ ‘ಮೌಸಮಿ’ ಎಂಬ ಬಿಳಿಹುಲಿ ಎರಡು ಮರಿಗಳಿಗೆ ಶನಿವಾರ(ಜೂನ್ 07) ರಾತ್ರಿ ಜನ್ಮ ನೀಡಿದೆ.* 9ರಿಂದ 11 ಗಂಟೆಯ ನಡುವೆ ಜನನ ನಡೆದಿದ್ದು, ಒಂದು ಮರಿ ಬಿಳಿ ಬಣ್ಣದಲ್ಲಿದೆ ಮತ್ತು ಇನ್ನೊಂದು ಸಹಜ ಬಣ್ಣ ಹೊಂದಿದೆ.* ತಾಯಿ ಹುಲಿ ಹಾಗೂ ಮರಿಗಳು ಆರೋಗ್ಯವಾಗಿದ್ದು, 24 ಗಂಟೆಗಳಿಗೂ ಹೆಚ್ಚು ಕಾಲ ನಿಗಾ ವಹಿಸಲಾಗಿದೆ. ಹತ್ತಿರದ ದಿನಗಳಲ್ಲಿ ಆರೋಗ್ಯ ತಪಾಸಣೆ ನಡೆಯಲಿದೆ.* ಮರಿಗಳು ತಾಯಿಯೊಡನೆ ಇರುವುದರಿಂದ ಲಿಂಗದ ಮಾಹಿತಿ ಇನ್ನೂ ಲಭ್ಯವಾಗಿಲ್ಲ.* ಈ ಮರಿಗಳು ‘ರಾಜೇಶ್’ ಎಂಬ ಸಹಜ ಬಣ್ಣದ ಹುಲಿ ಹಾಗೂ ‘ಮೌಸಮಿ’ ಎಂಬ ಬಿಳಿಹುಲಿಯಿಂದ ಜನಿಸಿವೆ.* ‘ಮೌಸಮಿ’ಗೆ ಇದು ಎರಡನೇ ಹೆರಿಗೆ. ಈಗ ಉದ್ಯಾನದಲ್ಲಿ ಒಟ್ಟು 29 ಹುಲಿಗಳಿದ್ದು, 17 ಗಂಡು, 10 ಹೆಣ್ಣು ಹಾಗೂ 2 ಮರಿಗಳು ಸೇರಿವೆ. 19 ಸಹಜ ಬಣ್ಣದ, 6 ಬಿಳಿ ಮತ್ತು 4 ಕಪ್ಪುಬಣ್ಣದ ಹುಲಿಗಳು ಇದ್ದಾರೆ.* ನಂದನಕಾನನ ಬಯೋಲಾಜಿಕಲ್ ಪಾರ್ಕ್ ಭುವನೇಶ್ವರದಿಂದ 10 ಕಿ.ಮಿ ದೂರದಲ್ಲಿ, 470 ಹೆಕ್ಟರ್ ವಿಸ್ತಾರದಲ್ಲಿದೆ.