Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನಂದಗಡದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥ 'ವೀರಭೂಮಿ' ಲೋಕಾರ್ಪಣೆ.
Authored by:
Akshata Halli
Date:
19 ಜನವರಿ 2026
➤
ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ತ್ಯಾಗ ಮತ್ತು ಬಲಿದಾನದ ನೆನಪಿಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ನಿರ್ಮಿಸಲಾದ
'ವೀರಭೂಮಿ'
ಯನ್ನು
January 19, 2026
ರಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ವೀರಭೂಮಿ' ಎಂದರೆ
ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ನಂದಗಡದಲ್ಲಿ ನಿರ್ಮಿಸಲಾದ ಪ್ರೇಕ್ಷಣೀಯ ಸ್ಥಳ ಮತ್ತು ಸ್ಮಾರಕ
ಇದನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಅವರ ಸಹಚರರನ್ನು ಬ್ರಿಟಿಷರು (ಜನೆವರಿ 26, 1831) ಗಲ್ಲಿಗೇರಿಸಿದ ಐತಿಹಾಸಿಕ ಸ್ಥಳದಲ್ಲಿ ನಿರ್ಮಿಸಲಾಗಿದೆ.
➤ ವೀರಭೂಮಿಯ ವಿಶೇಷತೆಗಳು:-
=>
ಅಭಿವೃದ್ಧಿ ಪ್ರಾಧಿಕಾರ:
ಈ ಯೋಜನೆಯನ್ನು 'ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ'ದ ವತಿಯಿಂದ ಅತ್ಯಂತ ಆಕರ್ಷಕವಾಗಿ ಅಭಿವೃದ್ಧಿಪಡಿಸಲಾಗಿದೆ.
=>
ಕೋಟೆ ಮತ್ತು ಪ್ರತಿಮೆಗಳು:
ವೀರಭೂಮಿಯ ಸುತ್ತಲೂ ಕೋಟೆ ಮಾದರಿಯ ಗೋಡೆ ನಿರ್ಮಿಸಲಾಗಿದ್ದು, ಒಳಗೆ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬದುಕು ಹಾಗೂ ಬ್ರಿಟಿಷರ ವಿರುದ್ಧದ ಹೋರಾಟವನ್ನು ಬಿಂಬಿಸುವ ಸುಂದರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ.
=>
ವಸ್ತು ಸಂಗ್ರಹಾಲಯ:
ಕೆರೆಯ ಮಧ್ಯೆ ರಾಯಣ್ಣನ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಸುಸಜ್ಜಿತ ವಸ್ತು ಸಂಗ್ರಹಾಲಯವನ್ನೂ ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿದೆ.
=>
ಆಧುನಿಕ ತಂತ್ರಜ್ಞಾನ:
ರಾಯಣ್ಣನ ಜೀವನದ 200 ವರ್ಷಗಳ ಹಳೆಯ ಯಶೋಗಾಥೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸಲು
ರೋಬೋಟಿಕ್ ತಂತ್ರಜ್ಞಾನ
, 3D ಚಿತ್ರಮಂದಿರ, ಧ್ವನಿ ಮತ್ತು ಬೆಳಕು (Sound and Light) ಪ್ರಭಾವಗಳನ್ನು ಬಳಸಲಾಗಿದೆ.
=>
ಚಾರಿತ್ರಿಕ ಸನ್ನಿವೇಶಗಳು:
ಹಂಡಿ ಬಡಗನಾಥ ಮಠ, ಸಂಪಗಾವಿ ತಾಲ್ಲೂಕು ಕಚೇರಿ ದಾಳಿ, ಸುರಪುರ ಅರಮನೆಯ ಸಂಪರ್ಕ ಸೇರಿದಂತೆ ರಾಯಣ್ಣನ ಜೀವನದ ಪ್ರಮುಖ ಘಟ್ಟಗಳನ್ನು ಕಥಾಚಿತ್ರ ಮತ್ತು ಉಬ್ಬುಶಿಲ್ಪಗಳ ಮೂಲಕ ಮರುಸೃಷ್ಟಿಸಲಾಗಿದೆ.
➤
ಯುವ ಪೀಳಿಗೆಯಲ್ಲಿ ದೇಶಪ್ರೇಮವನ್ನು ಜಾಗೃತಗೊಳಿಸುವುದು ಮತ್ತು ನಾಡಿನ ವೀರ ಹೋರಾಟಗಾರರ ಇತಿಹಾಸವನ್ನು ದಾಖಲಿಸಿ ಸಂರಕ್ಷಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
Take Quiz
Loading...