* ಕಳೆದ ಒಂದು ದಶಕದಿಂದ ರಾಜಧಾನಿ ಜನರ ದೈನಂದಿನ ಒಡನಾಡಿಯಾಗಿರುವ ನಮ್ಮ ಮೆಟ್ರೋದ ಪ್ರಯಾಣ ದರ ಏರಿಕೆ ಫೆಬ್ರುವರಿ 9ರಿಂದ ಜಾರಿಗೆ ಬಂದಿದ್ದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ನಿರ್ಧಾರದಿಂದ ಅನೇಕ ಪ್ರಯಾಣಿಕರು ನಿರಾಶೆಗೊಂಡಿದ್ದಾರೆ.* ಬಿಎಂಟಿಸಿ ಬಸ್ಗಳು, ಟ್ಯಾಕ್ಸಿ, ಆಟೊ, ಕ್ಯಾಬ್ ದರಕ್ಕಿಂತಲೂ ಮೆಟ್ರೊ ಪ್ರಯಾಣವು ತುಂಬಾ ದುಬಾರಿಯಾಗಿದೆ. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ವಾಹನಗಳ ಪ್ರಯಾಣವೂ ಅಗ್ಗವೆನಿಸಿದೆ. * ದೇಶದ 17 ನಗರಗಳಲ್ಲಿರುವ ಮೆಟ್ರೊ ಸೇವೆಗೆ ಹೋಲಿಸಿದಲ್ಲಿ ಬೆಂಗಳೂರಿನ 'ನಮ್ಮ ಮೆಟ್ರೊ' ಪ್ರಯಾಣ ದರವು ಹೆಚ್ಚಾಗಿದೆ.* ಪ್ರಯಾಣ ದರವನ್ನು ಶೇ.40-45ರಷ್ಟು ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ. ಹಲವು ಪ್ರಯಾಣಿಕರು ಮಾರ್ಗ ಮತ್ತು ದೂರವನ್ನು ಅವಲಂಬಿಸಿ ತಮ್ಮ ಪ್ರಯಾಣದ ವೆಚ್ಚವು 80-90 ಶೇಕಡದಷ್ಟು ಹೆಚ್ಚಾಗಿದೆ ಎಂದು ಹೇಳುತ್ತಿದ್ದಾರೆ.* ಬನಶಂಕರಿಯಿಂದ ಮೆಜೆಸ್ಟಿಕ್ಗೆ ಈ ಹಿಂದೆ 26 ರೂ. ಇತ್ತು. ಈಗ ಅದು 40 ರೂ. ಆಗಿದೆ. 4 ಜನರಿಗೆ ಮಿನಿ ಕಾರ್ ಕ್ಯಾಬ್ ಬೆಲೆ 173. ಅಂದರೆ ಒಬ್ಬ ವ್ಯಕ್ತಿಗೆ 43.25 ರೂ. ಮೆಟ್ರೋ ಬದಲಿಗೆ ಕಾರಿನಲ್ಲಿ ಹೋಗಬಹುದು. ಮೆಟ್ರೋ ದುಬಾರಿಯಾಗಿದೆ.* ದರ ಏರಿಕೆ ಬಳಿಕ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲೂ ಶೇ.4ರಷ್ಟು ಕಡಿಮೆಯಾಗಿದೆ.* ನಮ್ಮ ಮೆಟ್ರೊ ಪ್ರಯಾಣದ ಕನಿಷ್ಠ ದರ 10 ರೂ. ಇದ್ದಿದ್ದನ್ನು ಹಾಗೆಯೇ ಉಳಿಸಿಕೊಂಡು, ಗರಿಷ್ಠ ದರವನ್ನು 60 ರಿಂದ 90 ರೂ.ಗಳಿಗೆ ಏರಿಸಲಾಗಿದೆ.