Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನಮ್ಮ ಮೆಟ್ರೋ ಹಳದಿ ಮಾರ್ಗ: ಜೂನ್ನಲ್ಲಿ ಆರಂಭವಾಗುವ ನಗರ ಸಂಚಾರದ ಹೊಸ ಅಧ್ಯಾಯ
29 ಎಪ್ರಿಲ್ 2025
* ಬೆಂಗಳೂರು ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೊ ಹಳದಿ ಮಾರ್ಗಕ್ಕೆ ಪೂರೈಕೆಯಾಗಲು ಮೂರನೇ ರೈಲು ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಲ್ಲಿ ತಯಾರಾಗಿದೆ. ಪ್ಯಾಕಿಂಗ್ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಹೊರಡಲಿದೆ. ಹಳದಿ ಮಾರ್ಗದಲ್ಲಿ ಜೂನ್ನಲ್ಲಿ ರೈಲು ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್ಸಿಎಲ್ ಇಟ್ಟುಕೊಂಡಿದೆ.
* ಬೊಮ್ಮಸಂದ್ರ–ಆರ್.ವಿ. ರಸ್ತೆ ನಡುವಿನ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಳ್ಳಲು ಕನಿಷ್ಠ ಮೂರು ರೈಲುಗಳ ಅವಶ್ಯವಿದ್ದು ಚಾಲಕ ರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ (ಮೂಲ ಮಾದರಿ) ಎರಡು ರೈಲುಗಳು ಈಗಾಗಲೇ ಪೂರೈಕೆಯಾಗಿವೆ. ಮೂರನೇ ರೈಲಿಗಾಗಿ ಬಿಎಂಆರ್ಸಿಎಲ್ ಕಾಯುತ್ತಿದೆ.
* ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ 36 ರೈಲುಗಳನ್ನು ತಯಾರಿಸಲಾಗುತ್ತಿದೆ. ಅದರಲ್ಲಿ 34 ರೈಲುಗಳು ಬಿಎಂಆರ್ಸಿಎಲ್ಗೆ ಬರಲಿವೆ. 14 ರೈಲುಗಳು ಹಳದಿ ಮಾರ್ಗಕ್ಕೆ ಬಳಕೆಯಾಗಲಿವೆ. ಹಾಗೂ ಉಳಿದ ರೈಲುಗಳು ಹಸಿರು ಮತ್ತು ನೇರಳೆ ಮಾರ್ಗದಲ್ಲಿರುವ ರೈಲುಗಳ ಕೊರತೆಯನ್ನು ನೀಗಿಸಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
* ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೊಸಿಸ್ ಫೌಂಡೇಶನ್ (ಕೋನಪ್ಪನ ಅಗ್ರಹಾರ), ಎಲೆಕ್ಟ್ರಾನಿಕ್ ಸಿಟಿ, ಬೆರಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್.ವಿ. ರಸ್ತೆ ನಿಲ್ದಾಣಗಳಿರುವ ಹಳದಿ ಮಾರ್ಗವು 18.8 ಕಿ.ಮೀ ಉದ್ದದ ಇದೆ. ಐಟಿ ಕಂಪನಿಗಳೇ ಹೆಚ್ಚಿರುವ ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸಲಿದೆ.
* ಯೆಲ್ಲೋ ಲೈನ್ನ ಪ್ರಮುಖ ಆಕರ್ಷಣೆಗಳಲ್ಲಿ ಜಯದೇವ ಆಸ್ಪತ್ರೆ ನಿಲ್ದಾಣವು ಭಾರತದಲ್ಲಿ ಅತಿ ಎತ್ತರದ ಮೆಟ್ರೋ ನಿಲ್ದಾಣವಾಗಿದ್ದು, 39 ಮೀಟರ್ ಎತ್ತರದ ಆರು ಮಟ್ಟಗಳಿರುವ ಈ ನಿಲ್ದಾಣವು ಯೆಲ್ಲೋ ಮತ್ತು ಪಿಂಕ್ ಲೈನ್ಗಳ ನಡುವೆ ಇಂಟರ್ಚೇಂಜ್ ಹಬ್ ಆಗಿ ಕಾರ್ಯನಿರ್ವಹಿಸುತ್ತದೆ .
* ಆರಂಭದಲ್ಲಿ ರೈಲು ಅರ್ಧಗಂಟೆಗೊಮ್ಮೆ ಸಂಚರಿಸಲಿದ್ದು, 50 ಸಾವಿರ ಜನರು ಪ್ರಯಾಣಿಸುವ ನಿರೀಕ್ಷೆ ಇದೆ. ಪೂರ್ಣ ಪ್ರಮಾಣದಲ್ಲಿ ಸಂಚಾರ ಶುರುವಾದರೆ ಸುಮಾರು 3.5 ಲಕ್ಷ ಜನರಿಗೆ ಉಪಯೋಗವಾಗಲಿದೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
* ಈ ಯೋಜನೆಯು ₹5,745 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಬೆಂಗಳೂರು ನಗರದ ದಕ್ಷಿಣ ಭಾಗದ ಉದ್ಯಮ ಮತ್ತು ನಿವಾಸಿ ಪ್ರದೇಶಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ.
* ಇದರಿಂದ, ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಈ ಯೋಜನೆ ಮಹತ್ವಪೂರ್ಣ ಪಾತ್ರವಹಿಸಲಿದೆ.
Take Quiz
Loading...