* ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದ ನಮೀಬಿಯಾ ಅಧ್ಯಕ್ಷ ಹಗೆ ಗೈಂಗೊಬ್ (82) ಅವರು 'ವಿಶ್ವ ಕ್ಯಾನ್ಸರ್‌ ದಿನ'ವೇ ನಿಧನರಾಗಿದ್ದಾರೆ. ಗೈಂಗೊಬ್ ಅವರಿಗೆ ಪತ್ನಿ ಮೋನಿಕಾ ಗೈಂಗೊಬ್ ಮತ್ತು ಮಕ್ಕಳು ಇದ್ದಾರೆ.* ಈ ಬಗ್ಗೆ ಅಧ್ಯಕ್ಷ ರ ಕಚೇರಿಯೂ ಕೂಡ ಅದಿಕೃತವಾಗಿ ಪ್ರಕಟಿಸಿದೆ. ಸಾಮಾಜಿಕ ತಾಣ ಎಕ್ಸ್‍ನಲ್ಲಿನ ಪೊಹಂಬಾ ಆಸ್ಪತ್ರೆಯಲ್ಲಿ ಗೈಂಗೊಬ್ ಅವರಿಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯಕೀಯ ತಂಡ ಅತ್ಯುತ್ತಮವಾಗಿ ಹಾರೈಕೆ ನೀಡಿತ್ತು ಆದರೆ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧ್ಯಕ್ಷರ ಪತ್ನಿ ಮೋನಿಕಾ ಗೈಂಗೊಬ್ ಪೋಸ್ಟ್ ಮಾಡಿದ್ದಾರೆ.* ಈ ವೇಳೆ ನಾನು ಮತ್ತು ಮಕ್ಕಳು ಅವರ ಪಕ್ಕದಲ್ಲೇ ಇದ್ದೆವು, ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. 82 ವರ್ಷ ವಯಸ್ಸಿನಲ್ಲಿ ಕಳೆದ ಜನವರಿ 8 ರಂದು ಕೊಲೊನೋಸ್ಕೋಪಿ ಮತ್ತು ಗ್ಯಾಸ್ಟ್ರೋಸ್ಕೋಪಿ ಮಾಡಲಾಯಿತು, ನಂತರ ಬಯಾಪ್ಸಿ ಮಾಡಲಾಯಿತು.* ನಮೀಬಿಯಾದ ಹಂಗಾಮಿ ಅಧ್ಯಕ್ಷ ಅಂಗೋಲೊ ಅವರು ದೇಶದ ಜನತೆ ಶಾಂತವಾಗಿರಲು ಕರೆ ನೀಡಿದರು, ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಲು ಕ್ಯಾಬಿನೆಟ್ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಹೇಳಿದರು.