* ನಮಿಬಿಯಾಗೆ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೆಟುಂಬೊ ನಂದಿ-ನ್ಡೈತ್ವಾ ಅವರು ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.* ನ್ಡೈತ್ವಾ ಅವರು ತಮ್ಮ ಶೇ. 57ರಷ್ಟು ಮತಗಳೊಂದಿಗೆ ಆಯ್ಕೆಯಾಗಿದ್ದು, ಇವರ ಪ್ರಮುಖ ಎದುರಾಳಿ IPC ಪಕ್ಷದ ಪಾಂಡುಲೇನಿ ಇತುಲಾ ಶೇ. 26ರಷ್ಟು ಮತ ಪಡೆದು ಸೋಲನುಭವಿಸಿದ್ದಾರೆ.* ನೆಟುಂಬೊ ನಂದಿ-ನ್ಡೈತ್ವಾ ಅವರು SWAPO ಪಕ್ಷದ 34 ವರ್ಷಗಳ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ. SWAPO ಪಕ್ಷ 1990ರಲ್ಲಿ ನಮೀಬಿಯಾದ ಸ್ವಾತಂತ್ರ್ಯದಿಂದಲೂ ಅಧಿಕಾರವನ್ನು ಕಾಯ್ದುಕೊಂಡಿದೆ ಎಂಬುದನ್ನು ಖಚಿತಪಡಿಸುತ್ತದೆ.* ನೆಟುಂಬೊ ಅವರು ವಿದೇಶಾಂಗ ಸಚಿವರಂತಹ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ ಮತ್ತು ಒಗ್ಗಟ್ಟಿನ ನಾಯಕಿಯೆಂದು ಪರಿಗಣಿಸಲ್ಪಡುತ್ತಾರೆ.* SWAPO ಪಕ್ಷ 96 ರಾಷ್ಟ್ರೀಯ ಸಭೆಯ ಸ್ಥಾನಗಳಲ್ಲಿ 51 ಗೆದ್ದಿದೆ. ರಾಜಕೀಯ ಸ್ಥಿರತೆಯಿದ್ದರೂ, ನಮೀಬಿಯಾ ನಿರುದ್ಯೋಗ ಮತ್ತು ಅಸಮಾನತೆಯಂತಹ ಸವಾಲುಗಳನ್ನು ಎದುರಿಸುತ್ತಿದೆ.