Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
🕊️ ನಕ್ಸಲಿಸಂ ಅಂತ್ಯದ ಹಂತದಲ್ಲಿ: ಕೇಂದ್ರದ ದೃಢ ನಿಲುವು — ರಾಜನಾಥ ಸಿಂಗ್
23 ಅಕ್ಟೋಬರ್ 2025
* ಪೊಲೀಸರು ಮತ್ತು ಭದ್ರತಾ ಪಡೆಗಳ ಅವಿರತ ಪ್ರಯ್ನತದಿಂದಾಗಿ ಎಡಪಂಥೀಯ ಉಗ್ರವಾದ ಪಿಡುಗು ಭಾರತದಲ್ಲಿ ಶೀಘ್ರದಲ್ಲೇ ಇತಿಹಾಸವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ ಮಂಗಳವಾರ ಹೇಳಿದ್ದಾರೆ.
* ಪೊಲೀಸ ಸ್ಮರಣಾರ್ಥ ದಿನದಂದು ರಕ್ಷಣಾ ಸಚಿವರು ಕೇಂದ್ರ ದೆಹಲಿಯ ಚಾಣಕ್ಯ ಪುರಿಯಲ್ಲಿರುವ ರಾಷ್ಟ್ರಿಯ ಪೊಲೀಸ ಸ್ಮಾರಕದಲ್ಲಿ ಗೌರವ ನಮನ ಸಲ್ಲಿಸಿ,ಗೌರವ ವಂದನೆ ಸ್ವೀಕರಿಸಿದರು.ಇದೇ ವೇಳೆ ಭದ್ರತಾ ಪಡೆ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನ್ನಾಡಿದ ಅವರು,ಒಂದು ಕಾಲದಲ್ಲಿ ಅವರು ರಾಜ್ಯದ ವಿರುದ್ಧ ಶಸ್ತ್ರಾಸ್ತ್ರ ಹಿಡಿದಿದ್ದ ಮಾವೋವಾದಿಗಳು ಇಂದು ಶರಣರಾಗುತ್ತಿದ್ದಾರೆ ಮತ್ತು ಅಭಿವೃದ್ಧಿಯ ಮುಖ್ಯ ವಾಹಿನಿಗೆ ತಮ್ಮನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ.
* ಭದ್ರತಾ ಪಡೆಗಳ ಅವಿರತ ಪ್ರಯ್ನತದಿಂದಾಗಿ,ಈ ಸಮಸ್ಯೆ ಈಗ ಇತಿಹಾಸವಾಗಲಿದೆ.ನಮ್ಮ ಎಲ್ಲ ಭದ್ರತಾ ಸಿಬ್ಬಂದಿ ಇದಕ್ಕಾಗಿ ಅಭಿನಂದನೆಗೆ ಅರ್ಹರು ಎಂದು ಸಿಂಗ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
* "ಧೀರ್ಘಕಾಲದಿಂದ 'ನಕ್ಸಲಿಸಂ' ನಮ್ಮ ಆಂತರಿಕ ಭದ್ರತೆಗೆ ಸಮಸ್ಯೆಯಾಗಿದೆ.ಅನೇಕ ಜಿಲ್ಲೆಗಳು ನಕ್ಸಲಿಸಂ ಚಟುವಟಿಕೆಗಳಿಂದ ಪ್ರಭಾವಿತವಾಗಿದ್ದ ಕಾಲವಿತ್ತು.ಆಗ ಅನೇಕ ಹಳ್ಳಿಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು.ಜನರು ಭಯದಿಂದ ವಾಸಿಸುತ್ತಿದ್ದರು.
* ಈ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡುವ ಈ ನಿಟ್ಟಿನಲ್ಲಿ ಪೊಲೀಸರು,ಸಿಆರ್ ಪಿಎಪ,ಬಿ ಎಸ ಎಫ ಮತ್ತು ಸ್ಥಳೀಯ ಆಡಳಿತವು ಸಂಘಟಿತ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿರುವ ರೀತಿ ಶ್ಲಾಘನೀಯ ಎಂದು ಸಿಂಗ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
* ನಕ್ಸಲರನ್ನು ನಿರ್ಮೂಲನೆ ಕೇಂದ್ರ ಸರ್ಕಾರವು 2026 ಮಾರ್ಚ 31 ರ ಗಡುವು ನಿಗದಿಪಡಿಸಿದ್ದು,ಗಡುವು ಮುಟ್ಟುವ ವಿಶ್ವಾಸದೊಂದಿಗೆ ಹೊಸ ಕಾರ್ಯತಂತ್ರ ರೂಪಿಸುತ್ತಿವೆ.ಈ ಕಾರ್ಯಕ್ಕಾಗಿ 1 .5 ಲಕ್ಷ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು,ಅವರು ವಿವಿಧ ರಾಜ್ಯಗಳಲ್ಲಿ ನಕ್ಸಲ ಪೀಡಿತ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
* ಕರ್ತವ್ಯ ಪಾಲನೆ ಮಾಡುದರ ಮೂಲಕ ತಮ್ಮ ಪ್ರಾಣ ತ್ಯಾಗ ಮಡಿದ ಪೊಲೀಸರ ನೆನಪಿಗಾಗಿ ಪ್ರತಿ ವರ್ಷ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗುತ್ತದೆ.
*ಹುತಾತ್ಮರ ದಿನದಂದು ರಕ್ಷಣಾ ಸಚಿವ ರಾಜನಾಥ ಸಿಂಗ ಜನರಿಗೆ ಸದ್ಯದಲ್ಲೆ ನಕ್ಸಲಿಸಂ ಸಮಸ್ಯೆಯನ್ನು ಅಂತ್ಯಗೊಳಿಸುತ್ತೇವೆ ಎಂದು ಭರವಸೆ ಮೂಡಿಸಿದ್ದಾರೆ.
Take Quiz
Loading...