* ನಿಸಾರ್ (NISAR – NASA-ISRO Synthetic Aperture Radar) ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಅಮೆರಿಕದ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ದ್ವಂದ್ವ-ರೇಡಾರ್ (Dual Radar) ಭೂ-ಪರಿವೀಕ್ಷಣಾ ಉಪಗ್ರಹವಾಗಿದೆ. ಭೂಮಿಯ ಮೇಲ್ಮೈಯ ಅತ್ಯಂತ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಲು ಮತ್ತು ಜಾಗತಿಕ ಪರಿಸರ ಅಧ್ಯಯನಕ್ಕೆ ಪ್ರಮುಖ ಮಾಹಿತಿಯನ್ನು ಒದಗಿಸಲು ಇದು ವಿನ್ಯಾಸಗೊಳಿಸಲಾಗಿದೆ.1. ನಿಸಾರ್ ಅನ್ನು ಜುಲೈ 30ರಂದು ಜಿಎಸ್ಎಲ್ವಿ–ಎಫ್16 ರಾಕೆಟ್ ಮೂಲಕ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು ನಿಸಾರ್ ಉಪಗ್ರಹವು ಭೂಮಿಯಿಂದ ಸುಮಾರು 747 ಕಿ.ಮೀ ಎತ್ತರದಲ್ಲಿರುವ ಸೂರ್ಯ-ಸಂಕ್ರಮಣ (Sun-synchronous) ಕಕ್ಷೆ ಯಲ್ಲಿ ಸಂಚರಿಸುತ್ತದೆ. ಮತ್ತು ಇದೀಗ ತನ್ನ 12 ಮೀಟರ್ ವ್ಯಾಸದ ಆಂಟೆನಾ ಪ್ರತಿಫಲಕ (antenna reflector) ಅನ್ನು ಯಶಸ್ವಿಯಾಗಿ ತೆರೆದು, ದತ್ತಾಂಶ ಸಂಗ್ರಹಿಸುವ ಕಾರ್ಯಾರಂಭಿಸಿದೆ.* ತಾಂತ್ರಿಕ ವೈಶಿಷ್ಟ್ಯಗಳು1. ದ್ವಂದ್ವ ರೇಡಾರ್ ವ್ಯವಸ್ಥೆ (Dual Radar System)ನಿಸಾರ್ ಎರಡು ವಿಧದ ರೇಡಾರ್ಗಳನ್ನು ಹೊಂದಿದೆ:=> ಎಲ್-ಬ್ಯಾಂಡ್ ರೇಡಾರ್ – ನಾಸಾ ನಿರ್ಮಿಸಿದೆ=> ಎಸ್-ಬ್ಯಾಂಡ್ ರೇಡಾರ್ – ಇಸ್ರೋ ನಿರ್ಮಿಸಿದೆಈ ಎರಡು ರೇಡಾರ್ಗಳ ಸಂಯೋಜನೆಯಿಂದ: ಮೋಡ, ಮಳೆ, ಧೂಳು, ಕತ್ತಲೆ ಮುಂತಾದ ಯಾವುದೇ ಪರಿಸ್ಥಿತಿಯಲ್ಲೂ, ದಿನ-ರಾತ್ರಿ ಎಲ್ಲ ಸಂದರ್ಭಗಳಲ್ಲೂ ಅತ್ಯಂತ ಸ್ಪಷ್ಟ ಮತ್ತು ನಿಖರ ಚಿತ್ರಗಳನ್ನು ಪಡೆಯಲು ಸಾಧ್ಯ.2. ಆಂಟೆನಾ ಕಾರ್ಯವಿಧಾನ :12 ಮೀಟರ್ ಆಂಟೆನಾಗಳು ಮೈಕ್ರೋವೇವ್ ಕಿರಣಗಳನ್ನು ಭೂಮಿಗೆ ಕಳುಹಿಸಿ, ಅದರ ಪ್ರತಿಬಿಂಬದಿಂದ ಕೆಳಗಿನ ಮಾಹಿತಿಗಳನ್ನು ಸಂಗ್ರಹಿಸುತ್ತವೆ: ಭೂಮಿಯ ತೇವಾಂಶ, ನೆಲದ ಚಲನೆ (ground deformation), ಸಸ್ಯವರ್ಗ, ಸಮುದ್ರ ಮಟ್ಟ, ಕಾಡು ಮತ್ತು ಕೃಷಿ ಭೂಮಿಗಳ ವಿವರಗಳು* ಪ್ರಥಮ ಚಿತ್ರ (First Image) :ಅಕ್ಟೋಬರ್ 29 ರಂದು ನಿಸಾರ್ ಉಪಗ್ರಹವು ತನ್ನ ಮೊದಲ ಚಿತ್ರವನ್ನು ಸೆರೆಹಿಡಿದಿದ್ದು, ಗೋದಾವರಿ ನದಿ ಪ್ರದೇಶವನ್ನು ಚಿತ್ರಿಸಿತು. ಈ ಚಿತ್ರದಲ್ಲಿ: ಮ್ಯಾಂಗ್ರೋವ್ ಅರಣ್ಯಗಳು, ಕೃಷಿ ಭೂಮಿಗಳು, ಕರಾವಳಿ ತೀರಗಳು, ಸಸ್ಯವರ್ಗದ ವಿವಿಧ ಪ್ರಕಾರಗಳನ್ನು ಅತ್ಯಂತ ಸ್ಪಷ್ಟತೆಯಿಂದ ಗುರುತಿಸಲಾಗಿತ್ತು. ಇದು ನಿಸಾರ್ನ ಉನ್ನತ ನಿಖರತೆಯುಳ್ಳ ಭೂ-ಪರಿವೀಕ್ಷಣಾ ಸಾಮರ್ಥ್ಯವನ್ನು ಸಾಬೀತು ಪಡಿಸಿತು.