* ಚೀತಾ ಸಂತತಿ ವೃದ್ಧಿಪಡಿಸಲು ಆಫ್ರಿಕಾ ಖಂಡದ ವಿವಿಧ ದೇಶಗಳಿಂದ ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಬೆಳೆಸಲಾಗುತ್ತಿದ್ದು, ಚೀತಾ 'ನಿರ್ವಾ' ಇತ್ತೀಚೆಗೆ 5 ಮರಿಗಳಿಗೆ ಜನ್ಮ ನೀಡಿದೆ. ಆ ಮರಿಗಳ ವಿಡಿಯೊವನ್ನು ಮುಖ್ಯಮಂತ್ರಿ ಮೋಹನ್ ಯಾದವ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.* ಚೀತಾ ಮರಿಗಳ ವಿಡಿಯೊ ಜಾಲತಾ ಣದಲ್ಲಿ ಭಾರಿ ವೈರಲ್ ಆಗಿದೆ. ಈ 5 ಮರಿಗಳ ಸೇರ್ಪಡೆಯಿಂದ ಕುನೋ ರಾಷ್ಟ್ರೀಯ ಅರಣ್ಯದಲ್ಲಿ 19 ಮರಿಗಳು ಸೇರಿದಂತೆ ಚೀತಾಗಳ ಸಂಖ್ಯೆ 29ಕ್ಕೇರಿದೆ. ಪಾವಕ್ -ಪ್ರಭಾವ್ ಗಂಡು ಚೀತಾಗಳನ್ನು ಮಧ್ಯ ಪ್ರದೇಶದ ಗಾಂಧಿ ಸಾಗರ ಆಭಯಾರಣ್ಯಕ್ಕೆ ವರ್ಗಾಯಿ ಸಲಾಗಿದೆ. ಇದರೊಂದಿಗೆ ಸದ್ಯ ಭಾರತದಲ್ಲಿ ಇರುವ ಆಫ್ರಿಕನ್ ಚೀತಾಗಳ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ.* ಐದುವರೆ ವರ್ಷದ 'ನಿರ್ವಾ' ಹೆಣ್ಣು ಚೀತಾವನ್ನು 2023ರಲ್ಲಿ ಸೌತ್ ಅಫ್ರಿಕಾದಿಂದ ಭಾರತಕ್ಕೆ ತಂದು ಕುನೋ ರಾಷ್ಟ್ರೀಯ ಅರಣ್ಯದಲ್ಲಿ ಬಿಡಲಾಗಿತ್ತು.* ಭಾರತದಲ್ಲಿ ಚೀತಾ ಪ್ರಾಜೆಕ್ಟ್ 2022ರಲ್ಲಿ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ನಮೀಬಿಯಾದಿಂದ 8 ಚೀತಾಗಳನ್ನು ಭಾರತಕ್ಕೆ ಕರೆತರಲಾಗಿತ್ತು. ಅವುಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳಾಗಿದ್ದವು. ಹಾಗೂ 2023 ರ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.