* ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲಂಗಾಣದ ನಿಜಾಮಾಬಾದ್ನಲ್ಲಿ ರಾಷ್ಟ್ರೀಯ ಅರಿಶಿನ ಮಂಡಳಿಯನ್ನು ಉದ್ಘಾಟಿಸಿದರು. ಈ ಕಾರ್ಯ ಕ್ರಮದ ವೇಳೆ ಅವರು ಮಂಡಳಿಯ ಲೋಗೋವನ್ನು ಅನಾವರಣಗೊಳಿಸಿದರು ಮತ್ತು ನಿಜಾಮಾಬಾದ್ ಅನ್ನು ‘ಅರಿಶಿನದ ರಾಜಧಾನಿ’ ಎಂದು ಘೋಷಿಸಿದರು.* ಅರಿಶಿನ ರೈತರಿಗೆ ಬೆಂಬಲ ನೀಡುವುದು, ರಫ್ತು ಹೆಚ್ಚಿಸುವುದು ಮತ್ತು ಜಾಗತಿಕ ಸ್ಪರ್ಧಾತ್ಮಕತೆಯೊಂದಿಗೆ ಕೃಷಿಯಲ್ಲಿ ನವೀನತೆ ತರಲಿದೆ. ಈ ಮಂಡಳಿ 2030ರೊಳಗೆ 1 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಲು ಪ್ರಯತ್ನಿಸಲಿದೆ.* ಅಮಿತ್ ಶಾ ಅವರು ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ ತರಬೇತಿ, ಪ್ಯಾಕೇಜಿಂಗ್, ಗುಣಮಟ್ಟ ಮಾನದಂಡಗಳ ಜಾರಿ, ಸಂಶೋಧನೆ ಮತ್ತು ಜಾಗತಿಕ ಮಾರುಕಟ್ಟೆಗೆ ಪ್ರವೇಶ ನೀಡುವುದಾಗಿ ಭರವಸೆ ನೀಡಿದರು.* ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು ಮತ್ತು ಸ್ಥಳೀಯ ಶಾಸಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.* ನಿಜಾಮಾಬಾದ್, ಜಗ್ತಿಯಾಲ್, ನಿರ್ಮಲ್ ಮತ್ತು ಕಾಮರೆಡ್ಡಿ ಜಿಲ್ಲೆಯು ಪ್ರಮುಖ ಅರಿಶಿನ ಉತ್ಪಾದಕ ಪ್ರದೇಶಗಳಾಗಿವೆ. 2023-24 ರಲ್ಲಿ 3 ಲಕ್ಷ ಹೆಕ್ಟೇರ್ ಭೂಮಿಯಲ್ಲಿ 10.74 ಲಕ್ಷ ಟನ್ ಅರಿಶಿನ ಉತ್ಪಾದನೆಯಾಗಿದೆ.* ಪ್ರಧಾನಿ ಮೋದಿ ಅವರು ನೀಡಿದ ಭರವಸೆ ಈಡೇರಿದಂತೆ, ರೈತರಿಗೆ ತಕ್ಷಣದ ಹಾಗೂ ದೀರ್ಘಕಾಲೀನ ಲಾಭ ನೀಡುವ ಗುರಿ ಹೊಂದಲಾಗಿದೆ ಎಂದು ಶಾ ಪುನರುಚ್ಚರಿಸಿದರು.