* ಅವಳಿ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾರನ್ನು ಮೇ 13 ಪ್ರಾದೇಶಿಕ ಸೇನೆಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ನಿಯಮಿತಗೊಳಿಸಲಾಗಿದೆ.* ಈ ನೇಮಕಾತಿ 2025ರ ಏಪ್ರಿಲ್ 16ರಿಂದ ಅನ್ವಯವಾಗುತ್ತದೆ ಎಂದು ಭಾರತ ಸರ್ಕಾರದ ಅಧಿಕೃತ ಪತ್ರಿಕೆಯಾದ ‘ದ ಗಝೆಟ್ ಆಫ್ ಇಂಡಿಯಾ’ ಮತ್ತು ಸಾಪ್ತಾಹಿಕ ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.* ‘‘1948ರ ಪ್ರಾದೇಶಿಕ ಸೇನೆ ನಿಯಮಾವಳಿಯ 31ನೇ ಪ್ಯಾರಾದ ಅಡಿಯಲ್ಲಿ ದೊರೆತ ಅಧಿಕಾರದಂತೆ, ರಾಷ್ಟ್ರಪತಿಯವರು 2025ರ ಏಪ್ರಿಲ್ 16ರಿಂದ ಕಾರ್ಯೋನ್ಮುಖವಾಗುವಂತೆ ಪಾಣಿಪತ್ ಜಿಲ್ಲೆಯ ಖಾಂಡ್ರ ಗ್ರಾಮದ ನಿವಾಸಿ ನೀರಜ್ ಚೋಪ್ರಾರಿಗೆ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲು ಒಪ್ಪಿಗೆ ನೀಡಿದ್ದಾರೆ’’ ಎಂಬುದಾಗಿ ಸೇನಾ ವ್ಯವಹಾರಗಳ ಇಲಾಖೆ ಜಂಟಿ ಕಾರ್ಯದರ್ಶಿ ಮೇಜರ್ ಜನರಲ್ ಜಿ.ಎಸ್. ಚೌಧರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.* 2016ರ ಆಗಸ್ಟ್ 26ರಂದು ನೀರಜ್ ಚೋಪ್ರಾರನ್ನು ಭಾರತೀಯ ಸೇನೆಗೆ ನಾಯಿಬ್ ಸುಬೇದಾರ್ ಹುದ್ದೆಯ ಜೂನಿಯರ್ ಕಮಿಶನ್ಡ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಎರಡು ವರ್ಷಗಳ ನಂತರ ಅವರಿಗೆ ಅರ್ಜುನ ಪ್ರಶಸ್ತಿ ಲಭಿಸಿತ್ತು.* ಚೋಪ್ರಾ ಖೇಲ್ ರತ್ನ ಹಾಗೂ ವಿಶಿಷ್ಟ ಸೇವಾ ಪದಕವನ್ನು ಪಡೆದಿರುವುದಲ್ಲದೆ, 2021ರಲ್ಲಿ ಸೇನೆಯ ಸುಬೇದಾರ್ ಹುದ್ದೆಗೆ ಭಡ್ತಿ ಪಡೆದಿದ್ದರು.