* 2024–25ನೇ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ ನಿರುದ್ಯೋಗ ಪ್ರಮಾಣವು ಶೇ 6.4ಕ್ಕೆ ಇಳಿಯಿತು ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (ಎನ್ಎಸ್ಎಸ್ಒ) ತಿಳಿಸಿದೆ.* ನಗರ ಪ್ರದೇಶದಲ್ಲಿ 15 ವರ್ಷ ಮತ್ತು ಮೇಲಿನ ವಯೋಮಾನದ ನಿರುದ್ಯೋಗ ಪ್ರಮಾಣ ಕಳೆದ ವರ್ಷದ ಇದೇ ತ್ರೈಮಾಸಿಕದ ಶೇ 6.5 ರಿಂದ ಅಲ್ಪ ಇಳಿಮುಖವಾಗಿದೆ.* ನಗರ ಪ್ರದೇಶದಲ್ಲಿ ಮಹಿಳೆಯರ ನಿರುದ್ಯೋಗ ಶೇ 8.1ಕ್ಕೆ ಇಳಿದಿದ್ದು, ಪುರುಷರ ನಿರುದ್ಯೋಗ ಶೇ 5.8ರಷ್ಟಿದೆ.* ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಘಟನೆಯಾದ ಎನ್ಎಸ್ಎಸ್ಒ ಬಿಡುಗಡೆ ಮಾಡಿದ 25ನೇ ಪಿಎಲ್ಎಫ್ಎಸ್ ಸಮೀಕ್ಷಾ ವರದಿಯಾಗಿದೆ.* ಹಿಂದಿನ ಕ್ವಾರ್ಟರ್ಗೆ (ಜುಲೈ-ಸೆಪ್ಟೆಂಬರ್) ಹೋಲಿಸಿದರೆ ಈ ದರದಲ್ಲಿ ವ್ಯತ್ಯಾಸವಾಗಿಲ್ಲ. ಆದರೆ, ಹಿಂದಿನ ವರ್ಷದ ಇದೇ ಕ್ವಾರ್ಟರ್ಗೆ ಹೋಲಿಸಿದರೆ 10 ಮೂಲಾಂಕಗಳಷ್ಟು ದರ ಕಡಿಮೆ ಆಗಿದೆ.* ಕೆಲಸ ಮಾಡಲು ಲಭ್ಯ ಇರುವ ಮತ್ತು ಅರ್ಹತೆ ಇರುವ ಒಟ್ಟು ಕಾರ್ಮಿಕರ ಅಥವಾ ಉದ್ಯೋಗಿಗಳ ಸಮೂಹದಲ್ಲಿ ಕೆಲಸ ಇಲ್ಲದ ವ್ಯಕ್ತಿಗಳ ಪ್ರಮಾಣವನ್ನು ನಿರುದ್ಯೋಗ ಎಂದು ಗಣಿಸಲಾಗಿದೆ. ಒಂದು ವಾರದಲ್ಲಿ ಯಾವುದೇ ದಿನದಲ್ಲಿ ಕನಿಷ್ಠ ಒಂದು ಗಂಟೆಯೂ ಕೆಲಸ ಮಾಡದ ವ್ಯಕ್ತಿಯನ್ನು ನಿರುದ್ಯೋಗ ಎಂದು ಪರಿಗಣಿಸಲಾಗುತ್ತದೆ. ಈ ಸಮೀಕ್ಷೆಯಲ್ಲಿ ನಗರ ಭಾಗವನ್ನು ಆಯ್ದುಕೊಳ್ಳಲಾಗಿದೆ.