* ಪಿಯಾಝೋ–ಎಲೆಕ್ಟ್ರಿಕ್ ತಂತ್ರಜ್ಞಾನವು ಇತ್ತೀಚೆಗೆ ಪರಿಸರ ಸ್ನೇಹಿ ಇಂಧನ ಉತ್ಪಾದನೆಯ ಹೊಸ ಆಯ್ಕೆ ರೂಪದಲ್ಲಿದೆ. ಜಲ, ಪವನ, ಸೌರ ಶಕ್ತಿಗಳ ಹೊರತಾಗಿಯೂ ವಿದ್ಯುತ್ ಉತ್ಪಾದನೆ ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದ್ದು, ಯಾಂತ್ರಿಕ ಒತ್ತಡವನ್ನು ವಿದ್ಯುತ್ ಆಗಿ ಪರಿವರ್ತಿಸಲು ಈ ತಂತ್ರಜ್ಞಾನ ಸಹಕಾರಿಯಾಗಿದೆ.* ಜಪಾನಿನ ಟೊಕಿಯೊ ನಗರದಲ್ಲಿ ಹೀಗೊಂದು ಪ್ರಯೋಗ ಯಶಸ್ವಿಯಾಗಿ ನಡೆಯುತ್ತಿದ್ದು, ಶಬುಯಾ ರೈಲ್ವೆ ನಿಲ್ದಾಣದಲ್ಲಿ ನಿತ್ಯ ಸಾವಿರಾರು ಜನರ ಹೆಜ್ಜೆಗಳ ಒತ್ತಡದಿಂದ ವಿದ್ಯುತ್ ಉತ್ಪಾದಿಸುತ್ತಿದ್ದಾರೆ.* ಪಿಯಾಝೋ ಎನ್ನುವುದು ಗ್ರೀಕ್ ಹಾಗೂ ಸಂಸ್ಕೃತ ಪದಗಳ ಸಂಯೋಜನೆಯಾಗಿದ್ದು, 'ಒತ್ತಡ' ಎಂಬ ಅರ್ಥ ಹೊಂದಿದೆ.* ಈ ತಂತ್ರಜ್ಞಾನ ಆಧಾರಿತ ನೆಲಹಾಸುಗಳ ಮೇಲೆ ಜನರು ನಡೆದಾಗ, ಅವರ ಹೆಜ್ಜೆಗಳ ಒತ್ತಡದಿಂದ ಧನ ಮತ್ತು ಋಣಪೂರ್ಣ ವಿದ್ಯುತ್ ಉತ್ಪತ್ತಿಯಾಗುತ್ತದೆ. ಈ ವಿದ್ಯುತ್ನಿಂದ ಎಲ್ಇಡಿ ಪರದೆಗಳು, ಮಾಹಿತಿ ಫಲಕಗಳು ಹಾಗೂ ಇತರ ಕಡಿಮೆ ವಿದ್ಯುತ್ ಬಳಕೆಯ ಸಾಧನಗಳನ್ನು ಕಾರ್ಯನಿರ್ವಹಿಸಲು ಬಳಸಲಾಗುತ್ತಿದೆ.* ಈ ತಂತ್ರಜ್ಞಾನವನ್ನು ಶಾಪಿಂಗ್ ಮಾಲ್, ವಿಮಾನ ನಿಲ್ದಾಣಗಳಲ್ಲೂ ಅಳವಡಿಸಲಾಗುತ್ತಿದೆ. ಆದರೆ, ಈ ತಂತ್ರಜ್ಞಾನಕ್ಕೂ ಸವಾಲುಗಳಿವೆ.* ಇದರಿಂದ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ ಕಡಿಮೆ ಮತ್ತು ತಂತ್ರಜ್ಞಾನದ ಸ್ಥಾಪನೆ ಹಾಗೂ ತಯಾರಿಕೆಯ ವೆಚ್ಚ ಬಹಳ ಹೆಚ್ಚಿನದು.* ಹಾಗಾದರೂ ಮುಂದಿನ ದಿನಗಳಲ್ಲಿ ಸಂಶೋಧನೆಗಳಿಂದ ವೆಚ್ಚ ತಗ್ಗುವ ನಿರೀಕ್ಷೆ ಇದೆ. ಭಾರತದಂತಹ ಜನಸಂಖ್ಯಾ ಗಾತ್ರದ ದೇಶದಲ್ಲಿ ಇದನ್ನು ಅಳವಡಿಸಿದರೆ, ಅದು ವಿದ್ಯುತ್ ಸ್ವಾವಲಂಬನೆಗೆ ದೊಡ್ಡ ಹಂತದ ತಿರುವಾಗಬಹುದು.