* ಸಾಗರ ಪ್ರದೇಶದಲ್ಲಿ ಹೆಚ್ಚಿನ ನಿಗಾ ಇರಿಸುವ ಜಲಾಂತರ್ಗಾಮಿ ನೌಕೆಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇರುವ ಸಾಮರ್ಥ್ಯದ ಸೂಪರ್‌ಸಾನಿಕ್‌ ಮಿಸೈಲ್‌ ಅಸಿಸ್ಟೆಡ್‌ ರಿಲೀಸ್‌ ಆಫ್‌ ಟಾರ್ಪೆಡೊ (ಸ್ಮಾರ್ಟ್)‌ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದೆ. ಇದರಿಂದ ಭಾರತದ ನೌಕಾಪಡೆಗೆ ಹೆಚ್ಚಿನ ಬಲ ಬಂದಂತಾಗಿದೆ.* ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿ ಸ್ಮಾರ್ಟ್‌ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. * ಇದರಿಂದ ಸಾಗರ ಪ್ರದೇಶದಲ್ಲಿ ನೌಕಾಪಡೆಯು ವೈರಿಗಳ ಮೇಲೆ ಇನ್ನಷ್ಟು ನಿಗಾ ಇರಿಸಲು, ಕ್ಷಿಪ್ರವಾಗಿ ಕಾರ್ಯಾಚರಣೆ ಕೈಗೊಳ್ಳಲು, ಪ್ರತಿದಾಳಿ ನಡೆಸಲು ನೆರವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. * ಇದು ಎರಡನೇ ಪರೀಕ್ಷಾರ್ಥ ಉಡಾವಣೆಯಾಗಿದೆ. ಒಡಿಶಾ ಕರಾವಳಿಯಲ್ಲಿರುವ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಮೇ 01 ರಂದು (ಬುಧವಾರ) ಪರೀಕ್ಷೆ ನಡೆಸಲಾಯಿತು. * 2020ರ ಅಕ್ಟೋಬರ್‌ 5ರಂದು ಅಬ್ದುಲ್‌ ಕಲಾಂ ದ್ವೀಪದಲ್ಲಿಯೇ ಮೊದಲ ಪರೀಕ್ಷೆ ನಡೆಸಲಾಗಿತ್ತು.* SMART ಮುಂದಿನ-ಪೀಳಿಗೆಯ ಕ್ಷಿಪಣಿ ಆಧಾರಿತ ಹಗುರ-ತೂಕದ ಟಾರ್ಪಿಡೊ ವಿತರಣಾ ವ್ಯವಸ್ಥೆಯಾಗಿದ್ದು, ಹಗುರವಾದ ಟಾರ್ಪಿಡೊಗಳ ಸಾಂಪ್ರದಾಯಿಕ ವ್ಯಾಪ್ತಿಯನ್ನು ಮೀರಿ ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು DRDO ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ.* ಕ್ಷಿಪಣಿಯ ವೈಶಿಷ್ಟ್ಯಗಳು- ಇದು ಕ್ಯಾನಿಸ್ಟರ್‌ ಆಧಾರಿತ, ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲ ಸಾಮರ್ಥ್ಯ ಹೊಂದಿದೆ.- ಭಾರತೀಯ ನೌಕಾಪಡೆಗಾಗಿ ಡಿಆರ್‌ಡಿಒ ದೇಶೀಯವಾಗಿ ನಿರ್ಮಿಸಿದೆ - ಸಾಗರ ಪ್ರದೇಶದಲ್ಲಿ ಯಾವುದೇ ತುರ್ತು ಪರಿಸ್ಥಿತಿ ಎದುರಾದಾಗ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಲಿದೆ.- ಇದು ಸುಮಾರು 643 ಕಿ.ಮೀ ದೂರದ ಗುರಿಯನ್ನು ಹೊಡೆದುರುಳಿಸುವ ದಕ್ಷತೆ ಹೊಂದಿದೆ.- 50 ಕೆ.ಜಿ. ಸ್ಫೋಟಕಗಳನ್ನು 20 ಕಿಲೋಮೀಟರ್‌ ದೂರದವರೆಗೆ ಸಾಗಿಸುವ ಸಾಮರ್ಥ್ಯ- ಆಗಸದಲ್ಲಿಯೇ ಶತ್ರುಗಳ ಪಡೆಯ ನೌಕೆಗಳನ್ನು ಡಿಟೆಕ್ಟ್‌ ಮಾಡುವ ತಂತ್ರಜ್ಞಾನದ ಅಳವಡಿಕೆ- ಆಗಸದಿಂದಲೂ ಉಡಾವಣೆ ಮಾಡುವ ದಕ್ಷತೆ, ಟ್ರಕ್‌ ಆಧಾರಿತ ಕೋಸ್ಟಲ್‌ ಬ್ಯಾಟರಿ ಮೂಲಕವೂ ಉಡಾವಣೆ ಸಾಧ್ಯ.