* ಹಿಂದೂ ಮಹಾಸಾಗರದಲ್ಲಿ ಚೀನಾ ಆಕ್ರಮಣದ ಆತಂಕದ ನಡುವೆಯೇ, ಶತ್ರು ಸಬ್ಮರೀನ್ಗಳನ್ನು ಪತ್ತೆ ಮಾಡಿ ನಾಶಮಾಡುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ಯುದ್ಧನೌಕೆ ‘ಆ್ಯನ್ಡ್ರೋಟ್’ ಭಾರತೀಯ ನೌಕಾಪಡೆ ಸೇರ್ಪಡೆಯಾಗಿದೆ.* ಕೋಲ್ಕತಾದ ಜಿಆರ್ಎಸ್ಇ ಸಂಸ್ಥೆ ನಿರ್ಮಿಸುತ್ತಿರುವ ಎಂಟು ನೌಕೆಗಳಲ್ಲಿ ಇದು ಎರಡನೆಯದು. 77 ಮೀ. ಉದ್ದದ ಈ ನೌಕೆ ಅತ್ಯಾಧುನಿಕ ಟಾರ್ಪಿಡೊ ಹಾಗೂ ಜಲಾಂತರ್ಗಾಮಿ ವಿರೋಧಿ ಅಸ್ತ್ರಗಳನ್ನು ಹೊಂದಿದೆ.* ₹1 ಲಕ್ಷ ಕೋಟಿ ಮೌಲ್ಯದ ಸಬ್ಮರೀನ್ ಖರೀದಿ ಯೋಜನೆ ಭಾರತ ಮುಂದಿನ ವರ್ಷ ಸುಮಾರು ₹1 ಲಕ್ಷ ಕೋಟಿ ವೆಚ್ಚದಲ್ಲಿ ಒಟ್ಟು 9 ಹೊಸ ಸಬ್ಮರೀನ್ಗಳ ಖರೀದಿಗೆ ಮುಂದಾಗಿದೆ.* ಮೂರು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳು: ಎಂಡಿಎಲ್ ಹಾಗೂ ಫ್ರೆಂಚ್ ನೇವಲ್ ಗ್ರೂಪ್ ಜಂಟಿಯಾಗಿ ಭಾರತದಲ್ಲೇ ನಿರ್ಮಿಸಲಿವೆ. ಒಪ್ಪಂದ (₹36,000 ಕೋಟಿ) ಈಗಾಗಲೇ ಅನುಮೋದಿತವಾಗಿದ್ದರೂ ವಿಳಂಬವಾಯಿತು.* ಆರು ಸ್ಟೆಲ್ತ್ ಡೀಸೆಲ್ ಎಲೆಕ್ಟ್ರಿಕಲ್ ಸಬ್ಮರೀನ್ಗಳು: ₹65,000 ಕೋಟಿ ವೆಚ್ಚದ ಯೋಜನೆ. ಜರ್ಮನಿಯ ಟಿಕೆಂಎಂಎಸ್ ಮತ್ತು ಎಂಡಿಎಲ್ ಪಾಲುದಾರಿಕೆಯಲ್ಲಿ ನಡೆಯಲಿದೆ.* ಭಾರತ ತನ್ನ ಸಮುದ್ರ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಸ್ವದೇಶಿ ನೌಕೆಗಳೊಂದಿಗೆ ದೊಡ್ಡ ಮಟ್ಟದ ಸಬ್ಮರೀನ್ ಖರೀದಿ ಯೋಜನೆ ಕೈಗೊಂಡಿದೆ.