Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಏಪ್ರಿಲ್-11: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ
Authored by:
Yallamma G
Date:
11 ಎಪ್ರಿಲ್ 2026
➤
ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ (National Safe Motherhood Day):
ಪ್ರತಿ ವರ್ಷ ಏಪ್ರಿಲ್ 11 ರಂದು ಭಾರತದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ತಾಯಿ ಮತ್ತು ನವಜಾತ ಶಿಶುವಿನ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಗುರಿಯಾಗಿದೆ. ಭಾರತವು ಸುರಕ್ಷಿತ ಮಾತೃತ್ವಕ್ಕಾಗಿ ಪ್ರತ್ಯೇಕ ದಿನವನ್ನು ಘೋಷಿಸಿದ
ವಿಶ್ವದ ಮೊದಲ ದೇಶ
ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಾತ್ಮ ಗಾಂಧೀಜಿಯವರ ಪತ್ನಿ
ಕಸ್ತೂರಬಾ ಗಾಂಧಿ
ಅವರ ಜನ್ಮದಿನದ ನೆನಪಿಗಾಗಿ 2003ರಲ್ಲಿ ಕೇಂದ್ರ ಸರ್ಕಾರವು ಏಪ್ರಿಲ್ 11 ಅನ್ನು 'ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ' ಎಂದು ಘೋಷಿಸಿತು.
➤
ಈ ದಿನದ ಪ್ರಮುಖ ಉದ್ದೇಶಗಳು
- ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು.
- ಹೆರಿಗೆಯ ಸಮಯದಲ್ಲಿ ತಾಯಂದಿರ ಮರಣ ಪ್ರಮಾಣವನ್ನು (MMR) ಕಡಿಮೆ ಮಾಡುವುದು.
- ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರದ ಸರಿಯಾದ ಆರೈಕೆಯ ಬಗ್ಗೆ ಅರಿವು ಮೂಡಿಸುವುದು.
➤
ಸುರಕ್ಷಿತ ಮಾತೃತ್ವಕ್ಕಾಗಿ ಸರ್ಕಾರದ ಪ್ರಮುಖ ಯೋಜನೆಗಳು:
- ಜನನಿ ಸುರಕ್ಷಾ ಯೋಜನೆ (JSY):
ಆಸ್ಪತ್ರೆಗಳಲ್ಲಿ ಹೆರಿಗೆಯಾಗುವುದನ್ನು ಪ್ರೋತ್ಸಾಹಿಸಲು ಗರ್ಭಿಣಿಯರಿಗೆ ನೇರ ನಗದು ಸಹಾಯ ನೀಡಲಾಗುತ್ತದೆ.
- ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ (PMMVY):
ಮೊದಲ ಮಗುವಿನ ಜನನದ ವೇಳೆ ₹5,000 ಸಹಾಯಧನ. ಎರಡನೇ ಮಗು ಹೆಣ್ಣಾಗಿದ್ದರೆ ₹6,000 ಪ್ರೋತ್ಸಾಹಧನ ನೀಡಲಾಗುತ್ತದೆ.
- ಜನನಿ ಶಿಶು ಸುರಕ್ಷಾ ಕಾರ್ಯಕ್ರಮ (JSSK):
ಸರ್ಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಉಚಿತ ಚಿಕಿತ್ಸೆ, ಔಷಧಿ, ಪೌಷ್ಟಿಕ ಆಹಾರ ಮತ್ತು ಸಾರಿಗೆ ಸೌಲಭ್ಯ.
- ಸುರಕ್ಷಿತ ಮಾತೃತ್ವ ಆಶ್ವಾಸನ್ (SUMAN):
ಶೂನ್ಯ ವೆಚ್ಚದಲ್ಲಿ ಗುಣಮಟ್ಟದ ಸೇವೆ ಮತ್ತು ತುರ್ತು ಸಂದರ್ಭದಲ್ಲಿ ಕಡ್ಡಾಯ ದಾಖಲಾತಿ ಖಾತರಿ.
- PM ಸುರಕ್ಷಿತ್ ಮಾತೃತ್ವ ಅಭಿಯಾನ (PMSMA):
ಪ್ರತಿ ತಿಂಗಳ 9ನೇ ತಾರೀಖಿನಂದು ಗರ್ಭಿಣಿಯರಿಗೆ ಉಚಿತ ತಪಾಸಣೆ ಮತ್ತು ತಜ್ಞ ವೈದ್ಯರಿಂದ ಸಲಹೆ.
- ಲಕ್ಷ್ಯ (LaQshya) ಯೋಜನೆ:
ಹೆರಿಗೆ ಕೊಠಡಿ (Labour Room) ಮತ್ತು ಶಸ್ತ್ರಚಿಕಿತ್ಸಾ ಕೊಠಡಿಗಳ ಗುಣಮಟ್ಟ ಸುಧಾರಣೆ.
➤ ತಾಯಿಯ ಆರೋಗ್ಯವೇ ದೇಶದ ಆರೋಗ್ಯ. ಸರ್ಕಾರದ ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಮಾತೃತ್ವವನ್ನು ಖಚಿತಪಡಿಸಿಕೊಳ್ಳೋಣ.
Take Quiz
Loading...