* ಭಾರತೀಯ ಮೂಲದ ಅಮಿತ್ ಕ್ಷತ್ರಿಯ ಅವರನ್ನು ನಾಸಾದ ಹೊಸ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ.* ಇದು ನಾಸಾದಲ್ಲಿ ಉನ್ನತ ನಾಗರಿಕ ಸೇವಾ ಹುದ್ದೆಯಾಗಿದ್ದು, ಅವರು ನಾಸಾ ಮುಖ್ಯಸ್ಥ ಸೀನ್ ಪಿ. ಡಫಿಯ ಹಿರಿಯ ಸಲಹೆಗಾರರಾಗಿ ಹಾಗೂ ಏಜೆನ್ಸಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.* ಅಮಿತ್ ಕ್ಷತ್ರಿಯ 2003ರಿಂದ ನಾಸಾದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ರೋಬೋಟಿಕ್ ಭಾಗಗಳ ಕೆಲಸ ನಿರ್ವಹಿಸಿದರು. ನಂತರ ಹಾರಾಟ ನಿರ್ದೇಶಕರಾಗಿ ಹಾಗೂ ಐಎಸ್ಸೆಸ್ ವಾಹನ ಕಚೇರಿಯ ನಿರ್ವಹಣಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು.* 2021ರಲ್ಲಿ ಅವರು ನಾಸಾದ Exploration Systems Development Mission Directorate ನಲ್ಲಿ ಪ್ರಮುಖ ಹುದ್ದೆ ವಹಿಸಿಕೊಂಡರು. ಅವರು ಆರ್ಟೆಮಿಸ್ ಮಿಷನ್ ಅಡಿಯಲ್ಲಿ ಚಂದ್ರನ ಮಾನವಸಹಿತ ಕಾರ್ಯಾಚರಣೆಗಳ ಯೋಜನೆಗಳನ್ನು ಮುನ್ನಡೆಸಿದರು.* ಓರಿಯನ್ ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ತಂಡದ ಪ್ರಮುಖ ಸದಸ್ಯರಾಗಿದ್ದರು.* ಅಮಿತ್ ಕ್ಷತ್ರಿಯ ಪಸಾಡೆನಾದ ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪದವಿ ಹಾಗೂ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.* ಅಮಿತ್ ಅವರಿಗೆ ನಾಸಾದ ಅತ್ಯುತ್ತಮ ನಾಯಕತ್ವ ಪದಕ ಹಾಗೂ ಸಿಲ್ವರ್ ಸ್ನೂಪಿ ಪ್ರಶಸ್ತಿ ಲಭಿಸಿದೆ. ಇವರ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದು, ಅಮಿತ್ ವಿಸ್ಕಾನ್ಸಿನ್ನಲ್ಲಿ ಜನಿಸಿ ಬೆಳೆದಿದ್ದಾರೆ.