* ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎನ್ಐಎಸ್ಎಆರ್) ಭೂಮಿಯ ವೀಕ್ಷಣಾ ಉಪಗ್ರಹ ಸಂಶೋಧಕರಿಗೆ ಭೂಮಿಯ ಅರಣ್ಯ ಹಾಗೂ ಜೌಗು ಪ್ರದೇಶಗಳ ಪರಿಸರ ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಜಾಗತಿಕ ಇಂಗಾಲದ ಚಕ್ರ ಮತ್ತು ಹವಾಮಾನ ಬದಲಾವಣೆಯ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿಯುವುದಕ್ಕೆ ಸಹಾಯ ಮಾಡಲಿದೆ.* ಅಮೇರಿಕಾದ ನಾಸಾ ಮತ್ತು ಇಸ್ರೋ ಜಂಟಿಯಾಗಿ ಅಭಿವೃದ್ಧಿಪಡಿಸಿರುವ 'ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್' ಭೂಮಿಯ ವೀಕ್ಷಣಾ ಉಪಗ್ರಹವು ಸಂಶೋಧಕರಿಗೆ ನೆರವಾಗಲಿದೆ.* ಇದು 2024 ರ ಆರಂಭದಲ್ಲಿ ಉಡಾವಣೆಯಾಗಲಿದ್ದು, ಅರಣ್ಯಗಳು ಮತ್ತು ಜೌಗು ಪ್ರದೇಶಗಳು ಜಾಗತಿಕ ಹವಾಮಾನ ಬದಲಾವಣೆಗೆ ಕಾರಣವಾಗುವ ವಾತಾವರಣದಲ್ಲಿನ ಹಸಿರುಮನೆ ಅನಿಲಗಳನ್ನು ನೈಸರ್ಗಿಕವಾಗಿ ನಿಯಂತ್ರಿಸಲು ಪ್ರಮುಖವಾಗಿದೆ ಎಂದು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ (JPL) ತಿಳಿಸಿದೆ.* "ಇದು ಭೂಮಿಯ ಭೂ ಪ್ರದೇಶ ಮತ್ತು ಮಂಜುಗಡ್ಡೆಯ ಪ್ರದೇಶಗಳು ಹೇಗೆ ಬದಲಾಗುತ್ತಿದೆ ಎಂಬುದರ ಬಗ್ಗೆ  ಮಾಹಿತಿಯನ್ನು ಒದಗಿಸುತ್ತದೆ ಎಂದು ದಕ್ಷಿಣ ಕ್ಯಾಲಿಫೋರ್ನಿಯಾದ ನಾಸಾ (ಜೆಪಿಲ್) ನಲ್ಲಿ ಎನ್ಐಎಸ್ಎಆರ್ ಯೋಜನಾ ವಿಜ್ಞಾನಿ ಪಾಲ್ ರೋಸೆನ್ ಅವರು ತಿಳಿಸಿದ್ದಾರೆ.* ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎನ್ಐಎಸ್ಎಆರ್) ನ ಅತ್ಯಾಧುನಿಕ ರೇಡಾರ್ ವ್ಯವಸ್ಥೆಗಳು ಭೂಮಿಯ ಬಹುತೇಕ ಎಲ್ಲಾ ಭೂಮಿ ಮತ್ತು ಹಿಮದ ಮೇಲ್ಮೈಗಳನ್ನು ಪ್ರತಿ 12 ದಿನಗಳಿಗೊಮ್ಮೆ ಎರಡು ಬಾರಿ ಸ್ಕ್ಯಾನ್ ಮಾಡುತ್ತದೆ ಎಂದು ಜೆಪಿಎಲ್ ತಿಳಿಸಿದೆ.