* ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಐದು ರಾಷ್ಟ್ರಗಳ ಪ್ರವಾಸದ ಅಂತಿಮ ಹಂತವಾಗಿ ನಾಮಿಬಿಯಾದ ವಿಂಡ್ಹೋಕ್ ನಗರಕ್ಕೆ ಆಗಮಿಸಿದ್ದಾರೆ. * ಅವರು ನಾಮಿಬಿಯಾ ಅಧ್ಯಕ್ಷೆ ನೆಟುಂಬೋ ನಂದಿ-ದೈತ್ವಾ ನೆಟುಂಬೋ ಅವರ ಆಹ್ವಾನದ ಮೇರೆಗೆ ಈ ಪ್ರವಾಸ ಕೈಗೊಂಡಿದ್ದು, ಇದು ಭಾರತದಿಂದ ನಾಮಿಬಿಯಾಗೆ ಮೂರನೇ ಪ್ರಧಾನಿ ಮಟ್ಟದ ಭೇಟಿ.* ವಿಂಡ್ಹೋಕ್ನ ಹೊಸಿಯಾ ಕುಟಾಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿಗೆ ಅಧಿಕೃತ ಸ್ವಾಗತ ಸಿಕ್ಕಿತು. ಬಳಿಕ ಹಿಲ್ಟನ್ ಹೋಟೆಲ್ಗೆ ಆಗಮಿಸಿದಾಗ, ಭಾರತೀಯ ಸಮುದಾಯದಿಂದ ಉತ್ಸಾಹಭರಿತ ಸ್ವಾಗತವೂ ಲಭಿಸಿತು.* ಭಾರತ ಹಾಗೂ ನಾಮಿಬಿಯಾ ನಡುವಿನ ಪ್ರತಿನಿಧಿ ಮಟ್ಟದ ಮಾತುಕತೆ ಸ್ಥಳೀಯ ಸಮಯದಂತೆ ಬೆಳಿಗ್ಗೆ 11ಕ್ಕೆ ನಡೆಯಲಿದೆ.* ಇಂಧನ, ಆರೋಗ್ಯಸೇವೆ ಮತ್ತು ಔಷಧೋತ್ಪಾದನೆ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಹಲವು ಒಪ್ಪಂದಗಳಿಗೆ ಸಹಿ ನಿರೀಕ್ಷಿಸಲಾಗಿದೆ.* ಮೋದಿಯವರು ನಾಮಿಬಿಯಾದ ಮೊದಲ ಅಧ್ಯಕ್ಷ ಡಾ. ಸ್ಯಾಮ್ ನುಜೊಮಾ ಅವರಿಗೆ ನಮನ ಸಲ್ಲಿಸಲಿದ್ದು, ಭಾರತದೊಂದಿಗೆ ಸಂಬಂಧ ಬಲಪಡಿಸಿದ್ದಕ್ಕಾಗಿ ನಾಮಿಬಿಯಾದ ಅತ್ಯುನ್ನತ ನಾಗರಿಕ ಗೌರವವನ್ನು ಸ್ವೀಕರಿಸಲಿದ್ದಾರೆ. ನಂತರ ಅವರು ನಾಮಿಬಿಯಾ ಸಂಸತ್ತಿನಲ್ಲಿ ಭಾಷಣ ಮಾಡಲಿದ್ದಾರೆ.