* ಶಾಸಕರು, ಸಚಿವರವೇಶವ, ಹಾಗೂ ಭತ್ಯೆ ಹೆಚ್ಚಿಸುವ ಮಸೂದೆಗಳೂ ಸೇರಿ ಒಟ್ಟು ನಾಲ್ಕು ಮಸೂದೆಗಳಿಗೆ ರಾಜ್ಯಪಾಲ ತಾವರಚಂದ್ ಗೆಹಲೋತ್ ಅಂಕಿತ ಹಾಕಿದ್ದಾರೆ.* 'ಕರ್ನಾಟಕ ಗ್ರಾಮ ಹುದ್ದೆಗಳ ರದ್ದತಿಗೆ ಸಂಬಂಧಿಸಿದ (ತಿದ್ದುಪಡಿ) ಮಸೂದೆ–2025', 'ಕರ್ನಾಟಕ ಮಂತ್ರಿಗಳ ಸಂಬಳ ಮತ್ತು ಭತ್ಯೆ (ತಿದ್ದುಪಡಿ) ಮಸೂದೆ–2025', 'ಕರ್ನಾಟಕ ವಿಧಾನಮಂಡಳದ ಸಂಬಳ, ನಿವೃತ್ತಿ ವೇತನ ಹಾಗೂ ಭತ್ಯೆಗಳ (ತಿದ್ದುಪಡಿ) ಮಸೂದೆ–2025' ರಾಜ್ಯಪತ್ರದಲ್ಲಿ ಪ್ರಕಟವಾಗಿದ್ದು, ಇವು ಇದೀಗ ಕಾನೂನಾಗಿ ಜಾರಿಗೆ ಬಂದಿವೆ.* 'ವಾಹನಗಳ ತೆರಿಗೆ ನಿಗದಿಗೆ ಸಂಬಂಧಿಸಿದ (ತಿದ್ದುಪಡಿ) ಮಸೂದೆ–2025' ಗೆ ರಾಜ್ಯಪಾಲರು ಅಂಗೀಕಾರ ನೀಡಿ ಸಹಿ ಹಾಕಿದ್ದಾರೆ. ಈ ಕಾಯ್ದೆಯು ರಾಜ್ಯಪತ್ರದಲ್ಲಿ ಪ್ರಕಟಗೊಂಡು ಜಾರಿಗೆ ಬಂದಿದೆ.* 'ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ಕ್ಕೆ ಕುಲಪತಿ ನೇಮಕ ಪ್ರಕ್ರಿಯೆ ವಿಳಂಬವಾಗಿದ್ದು, ಮುಂದಿನ ಒಂದು ತಿಂಗಳಲ್ಲಿ ಕುಲಪತಿಯನ್ನು ನೇಮಕ ಮಾಡಬೇಕೆಂದು ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.