* ಉಭಯ ಸೇನೆಗಳ ನಡುವಿನ ರಕ್ಷಣಾ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರು ದ್ವಿಪಕ್ಷೀಯ ರಕ್ಷಣಾ ಮಾತುಕತೆ ಹಾಗೂ ಚರ್ಚೆ ನಡೆಸಲು ಮತ್ತು ಭಾರತದ 5ನೇ ಆವೃತ್ತಿಗೆ ಸಾಕ್ಷಿಯಾಗಲು ನಾಲ್ಕು ದಿನಗಳ ಉಜ್ಜಿಕಿಸ್ತಾನ್ ಪ್ರವಾಸಕ್ಕೆ ಏಪ್ರಿಲ್ 15 ರಂದು (ಸೋಮವಾರ) ತೆರಳಿದ್ದಾರೆ.* ಏಪ್ರಿಲ್ 15 ರಂದು ಪ್ರಾರಂಭವಾದ ಟೆರ್ಮೆಜ್ ಜಿಲ್ಲೆಯಲ್ಲಿ ಉಜ್ಜಕಿಸ್ತಾನ್ ಮಿಲಿಟರಿ ವ್ಯಾಯಾಮ ಡಸ್ಟ್ರಿಕ್ 2024 ಅನ್ನು ಜನರಲ್ ಮನೋಜ್ ಪಾಂಡೆ  ಅವರು ವೀಕ್ಷಣೆ ಮಾಡಲಿದ್ದಾರೆ.* ಜನರಲ್ ಮನೋಜ್ ಪಾಂಡೆ ಅವರ ಉಜ್ಬೇಕಿಸ್ತಾನ್ ಭೇಟಿಯು ಭಾರತ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯದ ನಡುವಿನ ರಕ್ಷಣಾ ಸಹಕಾರವನ್ನು ಬಲಪಡಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ ಎಂದು ಸೇನೆ ತಿಳಿಸಿದೆ .* ಉಜ್ಬೇಕಿಸ್ತಾನ್‌ಗೆ ಆಗಮಿಸಿದ ನಂತರ ಭಾರತೀಯ ಸೇನಾ ಮುಖ್ಯಸ್ಥರು ರಕ್ಷಣಾ ಸಚಿವ ಲೆಫ್ಟಿನೆಂಟ್ ಜನರಲ್ ಬಖೋದಿರ್ ಕುರ್ಬನೋವ್ ಅವರು, ರಕ್ಷಣಾ ಮೊದಲ ಉಪ ಮಂತ್ರಿ ಮತ್ತು ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಮುಖ್ಯಸ್ಥ ಮೇಜರ್ ಜನರಲ್ ಖಲ್ಮುಖಮೆಡೋವ್ ಶುಖ್ರತ್ ಗಾಯರತ್ಜಾನೋವಿಚ್ ಮತ್ತು ಉಪ ಮಂತ್ರಿ ಮತ್ತು ಮುಖ್ಯಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ.