* ಮ್ಯಾನ್ಮಾರ್ನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕಂಪದಿಂದ ಮೃತಪಟ್ಟು ದುರಂತದಲ್ಲಿ 2065 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಸೇನೆ ಸೋಮವಾರ(ಮಾರ್ಚ್ 31) ಮಾಹಿತಿ ನೀಡಿತು.* ಸರ್ಕಾರದ ವಕ್ತಾರ ಮೇಜರ್ ಜನರಲ್ ಜಾವ್ ಮಿನ್ ಟುನ್ ಎಂಆರ್ಟಿವಿ ವಾಹಿನಿಗೆ ಮಾತನಾಡುತ್ತ, 'ಭೂಕಂಪದಲ್ಲಿ 39,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ' ಎಂದರು.* ಶುಕ್ರವಾರ(ಮಾರ್ಚ್ 28) ಸಂಭವಿಸಿದ ಭೂಕಂಪದಲ್ಲಿ 60 ಮಸೀದಿಗಳು ನಾಶವಾಗಿದ್ದು, ರಂಜಾನ್ ತಿಂಗಳ ಪ್ರಾರ್ಥನೆ ಮಾಡುವಾಗ 700 ಮಂದಿಯು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ಮುಸ್ಲಿಂ ನೆಟ್ವರ್ಕ್ ಸದಸ್ಯ ಟುನ್ ಕೀ ಮಾಹಿತಿ ನೀಡಿದರು.* ಈ ಅವಘಡದಲ್ಲಿ ಸಿಲುಕಿದವರ ಪೈಕಿ 70 ಮಂದಿಯನ್ನು ರಕ್ಷಿಸಲಾಗಿದೆ. ಆದರೆ 50 ಮಂದಿ ಸಾವನ್ನಪ್ಪಿದ್ದು, 150 ಜನರು ಇನ್ನೂ ಕಾಣಿಸಿಕೊಂಡಿಲ್ಲ ಎಂದು ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ ತಿಳಿಸಿದರು.