* ಗುಣಮುಖವಾಗದ ಕಾಯಿಲೆಗಳಿಂದ ಬಳಲುತ್ತಿರುವವರು ಸಾವಿಗೀಡಾಗುವ ಔಷಧ ಸೇವಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೊಳಿಸುವುದಾಗಿ ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಅವರು ಘೋಷಿಸಿದ್ದಾರೆ. ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವಯಸ್ಕರಿಗೆ ಈ ಕಾನೂನಿನಿಂದ ಪ್ರಯೋಜನವಾಗಲಿದೆ ಎಂದು ಮೂಲಗಳು ತಿಳಿಸಿವೆ.* ಗುಣಪಡಿಸಲಾಗದ ಕಾಯಿಲೆಗೆ ಒಳಗಾಗಿ ದೈಹಿವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುವ ವಯಸ್ಕರಿಗೆ ಈ ಹೊಸ ಕಾನೂನು ಸೀಮಿತವಾಗಲಿದೆ ಎಂದು 'ಲಾ ಕ್ರೋಯಿಕ್ಸ್' ಮತ್ತು 'ಲಿಬರೇಶನ್' ಮ್ಯಾಕ್ರಾನ್ ಅವರು ತಿಳಿಸಿದ್ದಾರೆ.* ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳುವ ವೈದ್ಯಕೀಯ ನಿರ್ಧಾರಗಳಿಗೆ ಈ ಕಾನೂನಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ. * ಕ್ಯಾನ್ಸ‌ರ್ ರೋಗದ ಕೊನೆಯ ಹಂತದಲ್ಲಿರುವ ರೋಗಿಗಳಿಗೆ ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಉದಾಹರಣೆ ನೀಡಿದ್ದಾರೆ. ಅದರ ಜೊತೆಗೆ ತೀವ್ರ ಮಾನಸಿಕ ಕಾಯಿಲೆ, ಆಲ್‌ಝಮರ್ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಈ ಕಾನೂನಿಗೆ ಅರ್ಹರಲ್ಲ ಎಂದು ಮ್ಯಾಕ್ರಾನ್ ಅವರು ವಿವರಿಸಿದ್ದಾರೆ.* 18 ಮತ್ತು ಅದಕ್ಕಿಂತ ಅಧಿಕ ವಯಸ್ಸಿನ ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಪ್ರಾಪ್ತರಾಗಿರುವವರಿಗೆ ಈ ಕಾನೂನಿನ ಪ್ರಯೋಜನ ಪಡೆಯಬಹುದು.