* ಇಂಗ್ಲೆಂಡ್ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಸ್ಮೃತಿ ಮಂದಾನ, ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನ ಮೂರೂ ಮಾದರಿಯಲ್ಲಿ ಶತಕ ಸಿಡಿಸಿದ ಭಾರತದ ಏಕೈಕ ಹಾಗೂ ವಿಶ್ವದ ಐದನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.* ನಾಟಿಂಗ್ಹ್ಯಾಮ್ನಲ್ಲಿ ನಡೆದ ಪಂದ್ಯದಲ್ಲಿ ಮಂದಾನ (112 ರನ್, 62 ಎಸೆತ) ಶತಕದ ನೆರವಿನಿಂದ ಭಾರತ 210 ರನ್ ಕಲೆಹಾಕಿತು. ಪ್ರತಿಯಾಗಿ ಇಂಗ್ಲೆಂಡ್ ತಂಡ 113 ರನ್ಗೆ ಆಲೌಟ್ ಆಗಿದ್ದು, ಭಾರತ 97 ರನ್ಗಳ ಭರ್ಜರಿ ಜಯ ಸಾಧಿಸಿತು.* ಟಿ20 ಕ್ರಿಕೆಟ್ನಲ್ಲಿ ಇದು ಮಂದಾನ ಅವರ ಮೊದಲ ಶತಕ. ಇದರೊಂದಿಗೆ ಭಾರತದಿಂದ ಮೂರಂಕಿ ಗಡಿ ದಾಟಿದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಈ ಹಿಂದೆಗೆ ಹರ್ಮನ್ಪ್ರೀತ್ ಕೌರ್ ಈ ಸಾಧನೆ ಮಾಡಿದ್ದರು.* ಮಂದಾನ ಶತಕ ಗಳಿಸಿದ ಐದು ಆಟಗಾರ್ತಿಯರ ಪೈಕಿ: ಹೀದರ್ ನೈಟ್, ಟಾಮಿ ಬ್ಯೂಮಂಟ್ (ಇಂಗ್ಲೆಂಡ್), ಲೌರಾ ವೋಲ್ವಾರ್ಡ್ತ್ (ದಕ್ಷಿಣ ಆಫ್ರಿಕಾ), ಬೆತ್ ಮೂನಿ (ಆಸ್ಟ್ರೇಲಿಯಾ) ಇದ್ದಾರೆ.