* ಬಾಲ್ಯ ವಿವಾಹ ಮತ್ತು ಬಾಲ ಗರ್ಭಿಣಿ ಪ್ರಕರಣಗಳನ್ನು ನಿಯಂತ್ರಿಸಲು ಸರ್ಕಾರ ‘ಅಕ್ಕ ಪಡೆ’ಯನ್ನು ಆರಂಭಿಸಿದೆ. ಈಗಾಗಲೇ ಬೀದರ್ನಲ್ಲಿ ಯಶಸ್ವಿಯಾದ ಈ ಯೋಜನೆ, ಆಗಸ್ಟ್ 15ರಿಂದ ಬೆಳಗಾವಿ, ಮೈಸೂರು ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಯೋಜನೆ ಇದೆ.* ಮಹಿಳಾ ಪೊಲೀಸ್ಗಳು, ಎನ್ಸಿಸಿ ಅಧಿಕಾರಿಗಳು, ಸಿಬ್ಬಂದಿ ಒಳಗೊಂಡ ಈ ಪಡೆಗಳು ಗ್ರಾಮ, ಶಾಲೆ, ಕಾಲೇಜುಗಳಿಗೆ ತೆರಳಿ ಜಾಗೃತಿ ಮೂಡಿಸಲಿವೆ.* ಬಾಲ್ಯ ವಿವಾಹ, ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಪೋಕ್ಸೋ ಕಾಯ್ದೆ ಸೇರಿದಂತೆ ಹಲವು ವಿಷಯಗಳನ್ನು ತಿಳಿಹೇಳಲಿವೆ. ತುರ್ತುಸಹಾಯಕ್ಕಾಗಿ 112 ಹಾಗೂ 1098 ಕರೆಮಾಡುವ ಕುರಿತು ಜನರಲ್ಲಿ ಅರಿವು ಮೂಡಿಸಲಿವೆ.* ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 1800 ಬಾಲ ಗರ್ಭಿಣಿ ಪ್ರಕರಣಗಳು ದಾಖಲಾಗಿವೆ. ಕುಟುಂಬದ ಬದಲಾವಣೆ, ಬಾಲ್ಯ ವಿವಾಹ, ಹದಿಹರೆಯದ ಪ್ರೇಮ ಪ್ರಕರಣಗಳು, ಸಾಮಾಜಿಕ ಜಾಲತಾಣದ ಅತಿಯಾದ ಬಳಕೆ ಪ್ರಮುಖ ಕಾರಣಗಳಾಗಿವೆ.* ಕಾನೂನುಗಳಿದ್ದರೂ ಸಾಕಾಗದ ಹಿನ್ನೆಲೆಯಲ್ಲಿ, ಜನಜಾಗೃತಿ ಮೂಡಿಸುವುದೇ ಮುಖ್ಯ ಪರಿಹಾರ ಎಂದು ಸಚಿವರು ತಿಳಿಸಿದರು.