* ಕರ್ನಾಟಕ, ತಮಿಳುನಾಡು ಮತ್ತು ಕೇರಳದ ಏಳು ಹುಲಿ ಮೀಸಲು ಹಾಗೂ ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿರುವುದನ್ನು ಸಮೀಕ್ಷೆಯಲ್ಲಿ ದಾಖಲಿಸಲಾಗಿದೆ.* ತೀರಾ ಅಳಿವಿನಂಚಿನಲ್ಲಿ ಇರುವ ಪಕ್ಷಿಗಳೆನಿಸುವ ರಣಹದ್ದುಗಳ ಸಂಖ್ಯೆ 2023–24ರಲ್ಲಿ 320ರಷ್ಟಿತ್ತು. ಈಗ ಈ ಸಂಖ್ಯೆ 390ಕ್ಕೆ ಏರಿಕೆಯಾಗಿದೆಯೆಂದು ಸಮೀಕ್ಷಾ ವರದಿ ಸೂಚಿಸುತ್ತದೆ.* ಕಳೆದ ಫೆಬ್ರವರಿ 27 ಮತ್ತು 28ರಂದು ಕರ್ನಾಟಕದ ಬಂಡೀಪುರ, ಬಿಆರ್ಟಿ, ನಾಗರಹೊಳೆ ಹುಲಿ ಮೀಸಲು ಅರಣ್ಯಗಳು, ತಮಿಳುನಾಡಿನ ಮುದುಮಲೈ, ಸತ್ಯಮಂಗಲ ಮತ್ತು ನೆಲ್ಲೈ ಅರಣ್ಯ ವಿಭಾಗ ಹಾಗೂ ಕೇರಳದ ವಯನಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ರಣಹದ್ದುಗಳ ಸಮೀಕ್ಷೆ ನಡೆಸಲಾಯಿತು.* ಈ ಗಣತಿ ವೇಳೆ ಉದ್ದ ಕೊಕ್ಕಿನ ರಣಹದ್ದು, ಕೆಂಪು ತಲೆಯ ರಣಹದ್ದು, ಈಜಿಪ್ಟ್ನ ರಣಹದ್ದು, ಬಿಳಿ ಪುಕ್ಕದ ರಣಹದ್ದು ಸೇರಿದಂತೆ ಐದು ಪಕ್ಷಿ ಪ್ರಭೇದಗಳು ದಾಖಲಾಗಿವೆ.* ತಮಿಳುನಾಡಿನಲ್ಲಿ ಒಟ್ಟು 157 ರಣಹದ್ದುಗಳು ಪತ್ತೆಯಾಗಿದ್ದು, ಈ ಪೈಕಿ ಬಿಳಿ ಪುಕ್ಕದ ರಣಹದ್ದುಗಳು ಅತ್ಯಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಈ ಪ್ರಭೇದದ 110, ಉದ್ದ ಕೊಕ್ಕಿನ 31, ಕೆಂಪು ತಲೆಯ 11 ಮತ್ತು ಈಜಿಪ್ಟ್ನ 5 ರಣಹದ್ದುಗಳು ರಾಜ್ಯದ ವಿವಿಧ ಅಭಯಾರಣ್ಯಗಳಲ್ಲಿ ಕಂಡುಬಂದಿವೆ.* ಮುದುಮಲೈದಲ್ಲಿ 119, ಸತ್ಯಮಂಗಲದಲ್ಲಿ 33, ಬಂಡೀಪುರದಲ್ಲಿ 77, ಬಿಆರ್ಟಿಯಲ್ಲಿ 8, ನಾಗರಹೊಳೆ ಅರಣ್ಯದಲ್ಲಿ 23, ವಯನಾಡ್ನಲ್ಲಿ 125 ಮತ್ತು ನೆಲ್ಲೈ ಅರಣ್ಯ ವಿಭಾಗದಲ್ಲಿ 5 ರಣಹದ್ದುಗಳು ದಾಖಲಾಗಿವೆ.* ಮುದುಮಲೈ ಹುಲಿ ಮೀಸಲು ಅರಣ್ಯವು ದಕ್ಷಿಣ ಭಾರತದಲ್ಲಿ ಮೊದಲು ಕೆಂಪು ತಲೆಯ ರಣಹದ್ದು ಗೂಡುಗಳನ್ನು ಹೊಂದಿರುವ ಪ್ರಮುಖ ಸಂತಾನೋತ್ಪತ್ತಿ ಕೇಂದ್ರವಾಗಿ ಗುರುತಾಗಿದೆ. ಇಲ್ಲಿ 8 ಸ್ಥಳಗಳಲ್ಲಿ ಒಟ್ಟು 60 ಸಕ್ರಿಯ ಗೂಡುಗಳು ಪತ್ತೆಯಾಗಿದ್ದು, ಸುಮಾರು 120 ರಣಹದ್ದುಗಳಿರುವ ನಿರೀಕ್ಷೆಯಿದೆ ಎಂಬುದಾಗಿ ಸಮೀಕ್ಷೆ ವಿವರಿಸುತ್ತದೆ.