* ರಾಜ್ಯದ ಬಹುನಿರೀಕ್ಷಿತ ಸಮುದ್ರ ಆಂಬುಲೆನ್ಸ್ ಯೋಜನೆ ಮುಂದಿನ ವರ್ಷ ಸಾಕಾರಗೊಳ್ಳಲಿದೆ. ಮೀನುಗಾರಿಕೆ ಇಲಾಖೆ 7.85 ಕೋಟಿ ರೂ. ವೆಚ್ಚದಲ್ಲಿ 800 ಎಚ್ಪಿ ಸಾಮರ್ಥ್ಯದ ಆಂಬುಲೆನ್ಸ್ ನಿರ್ಮಾಣಕ್ಕೆ ಮುಂದಾಗಿದೆ.* ಈ ಆಂಬುಲೆನ್ಸ್ ನಲ್ಲಿ ಅಗ್ನಿಶಾಮಕ 4-5 ಹಾಸಿಗೆಗಳು, ಅರೆವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಘಟಕ, ಶವಾಗಾರ, ಸ್ಟ್ರೆಚರ್, ವ್ಯವಸ್ಥೆ, ಲೈಫ್ ಜಾಕೆಟ್ಗಳು ಹಾಗೂ GPS ಹೊಂದಿರಲಿದೆ. ಬೋಟ್ಗಳಲ್ಲಿ ತೊಂದರೆ ಎದುರಿಸುವ ಮೀನುಗಾರರಿಗೆ ತಕ್ಷಣ ನೆರವು ನೀಡುವುದು ಉದ್ದೇಶ.* ಮಾಲ್ಡೀವ್ಸ್ ಹಾಗೂ ಕೇರಳ ಮಾದರಿಯಲ್ಲಿ ತಯಾರಾಗುವ ಈ ಆಂಬುಲೆನ್ಸ್ ಬಗ್ಗೆ ಅಧ್ಯಯನ ನಡೆದಿದ್ದು, 2024-25 ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ರಾಹುಲ್ ಗಾಂಧಿ ನೀಡಿದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಯೋಜನೆ ಆರಂಭವಾಗಿದೆ.* ಕಾರ್ಯಾದೇಶ ಮುಂದಿನ ವಾರ ಜಾರಿಗೆ ಬರುವ ಸಾಧ್ಯತೆ ಇದೆ. ಏಳು ತಿಂಗಳಲ್ಲೇ ಆಂಬುಲೆನ್ಸ್ ಸಿದ್ಧವಾಗುವ ನಿರೀಕ್ಷೆ ಇದೆ. ಮಲ್ಪೆ ಅಥವಾ ಮಂಗಳೂರು ಬಂದರುಗಳಿಂದ ಕಾರ್ಯಾಚರಿಸಲಿದೆ.