* ಫ್ರಾನ್ಸ್ ಅಧ್ಯಕ್ಷರ ಕಚೇರಿ ತಿಳಿಸಿದಂತೆ, ಮುಂದಿನ ಕೃತಕ ಬುದ್ಧಿಮತ್ತೆ (ಎಐ) ಶೃಂಗ ಭಾರತದಲ್ಲಿ ನಡೆಯಲಿದೆ.* ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಎಐ ಶೃಂಗದ ಆತಿಥ್ಯವನ್ನು ಭಾರತ ವಹಿಸಲಿದೆ ಎನ್ನುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.* ಫ್ರಾನ್ಸ್ನಲ್ಲಿ ಮೊದಲ ಎಐ ಆಕ್ಷನ್ ಶೃಂಗ ನಡೆದಿದ್ದು, ಮೋದಿ ಮ್ಯಾಕ್ರನ್ಗೆ ಅಭಿನಂದನೆ ಸಲ್ಲಿಸಿದರು. ಮ್ಯಾಕ್ರನ್ ಭಾರತದ ಶೃಂಗಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.* ಶೃಂಗದಲ್ಲಿ ಕೈಗೊಂಡ ಎಐ ಫೌಂಡೇಶನ್ ಮತ್ತು ಸುಸ್ಥಿರ ಎಐ ಕೌನ್ಸಿಲ್ ರಚನೆ ಮಾಡುವ ನಿರ್ಧಾರವನ್ನು ಮೋದಿ ಸ್ವಾಗತಿಸಿದರು.